ಬೆಂಗಳೂರು : ಇತ್ತೀಚೆಗೆ ರಂಭಾಪುರಿ ಶ್ರೀಗಳು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗಿದ್ದಾರೆ ಎಂದು ಹೇಳಿಕೆ ನೀಡಿದರು. ಇದೀಗ ಈ ಒಂದು ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು ಗ್ಯಾರಂಟಿ ಯೋಜನೆಗಳಿಂದ ಜನ ಸೋಮಾರಿಗಳಾಗಿದ್ದಾರ? ಬಸ್ನಲ್ಲಿ ಓಡಾಡುವ ಮಹಿಳೆಯರು ಸೋಮಾರಿಗಳಾಗಿದ್ದಾರಾ? ಎಂದು ಶ್ರೀಗಳ ಹೇಳಿಕೆಗೆ ತಿರುಗೇಟು ನೀಡಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಹಲ್ಯಾಬಾಯಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅನುಭವದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಸ್ನೇಹಿತನ ಜೊತೆ ರೂಮ್ ಮಾಡಿಕೊಂಡಿದ್ದೆ. ಅನ್ನ ಮಾಡಿ ಊಟ ಮಾಡಿ ಮಾಡುತ್ತಿದ್ದೆವು. ಸಾಂಬಾರ್ ಹೋಟೆಲ್ ನಿಂದ ತರುತ್ತಿದ್ವಿ. ಹೀಗಾಗಿ ನಾವು ವಿದ್ಯಾಸಿರಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಒಂದು ತಿಂಗಳಿಗೆ 1,500 ಕೊಡುತ್ತಿದ್ದೇವೆ ಆರ್ಥಿಕವಾಗಿ ಸಹಾಯ ಮಾಡಿದರೆ ಸೋಮಾರಿ ಆಗ್ತಾರಾ? ಇದು ಸಾಧ್ಯವಾ? 1.23 ಕೋಟಿ ಕುಟುಂಬಗಳಿಗೆ ತಿಂಗಳಿಗೆ 2000 ನೀಡುತ್ತಿದ್ದೇವೆ ಇದು ಸಹಾಯ ಆಗುತ್ತೆ ಅಲ್ವಾ. ಆರ್ಥಿಕವಾಗಿ ಸಹಾಯ ಆಗುತ್ತೆ ತಾನೇ? ಇಲ್ಲ ಅಂದ್ರೆ ಗಂಡನ ಮುಂದೆ ಕಾಯ್ತಾ ಕೂರಬೇಕು.
ಹಾಗಾಗಿ ಗೃಹಲಕ್ಷ್ಮಿ, ಗೃಹಜೋತಿ ಕಾರ್ಯಕ್ರಮ ಜಾರಿ ಮಾಡಿದೆ. ಉಚಿತ ಗ್ಯಾರಂಟಿಯಿಂದ ಜನ ಸೋಮಾರಿ ಆಗ್ತಾರೆ ಅಂತಾರೆ ಬಸ್ನಲ್ಲಿ ಓಡಾಡು ಮಹಿಳೆಯರು ಸೋಮಾರಿಗಳಾಗಿದ್ದಾರೆ ಗ್ಯಾರೆಂಟಿಗಳಿಂದ ಇನ್ನೂ ಆಕ್ಟಿವ್ ಆಗ್ತಿವಿ ಅಂತ ಹೇಳ್ತಾರೆ ಈ ಹಿಂದೆ ಬಿಜೆಪಿ ಶಾಸಕ ಉಚಿತ ಅಜ್ಜಿಯ ಬಗ್ಗೆ ಪ್ರಶ್ನೆಸಿದರು ಗುರಿ ಹಾಕಿ ಕೊಟ್ಟಿದ್ದಕ್ಕೆ ಕೆಲಸಕ್ಕೆ ಜನ ಬರ್ತಿಲ್ಲ ಅಂದರು ನಾನು ಹಸಿವಿನಿಂದ ಬಡವರು ಮಲಗಬಾರದು ಎದ್ದಿದ್ದೆ ಸೋಮಾರಿಗಳ ಆದರೆ ಆಗಲಿ ನೀವು ದಿನಾ ಕೆಲಸ ಮಾಡಿ ನೀವು ಕೆಲಸ ಮಾಡಿ ಸೋಮಾರಿಗಳಾಗ್ರಪ್ಪಾ ಎದ್ದಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.