Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಮೆರಿಕ ಮಹತ್ವದ ಹೆಜ್ಜೆ ; ಮಾ.6ರಂದು ನಾಲ್ವರು ಗಗನಯಾತ್ರಿಗಳ ಸಹಿತ ‘ಚಂದ್ರಯಾನ’ಕ್ಕೆ ಸಜ್ಜು

20/02/2026 10:23 PM

CBSE ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ; ಬೋರ್ಡ್ ಪರೀಕ್ಷೆ ಬರೆಯಲು ’12-ಅಂಕಿಯ ಗುರುತಿನ ಸಂಖ್ಯೆ’ ಕಡ್ಡಾಯ

20/02/2026 9:39 PM

ಏ.1ರಿಂದ ‘NHAI’ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಗಳು ಸ್ಥಗಿತ ; FASTAG, UPI ಮೂಲಕ ಟೋಲ್ ಪಾವತಿ!

20/02/2026 9:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪೂರ್ಣ ಪ್ರಮಾಣದ ‘KPCC’ ಅಧ್ಯಕ್ಷರನ್ನು ನೇಮಕ ಮಾಡಿ : ಪರೋಕ್ಷವಾಗಿ ಡಿಕೆಶಿಯನ್ನ ತೆಗೆದು ಹಾಕಿ ಎಂದ ಜಾರಕಿಹೊಳಿ!
KARNATAKA

BIG NEWS : ಪೂರ್ಣ ಪ್ರಮಾಣದ ‘KPCC’ ಅಧ್ಯಕ್ಷರನ್ನು ನೇಮಕ ಮಾಡಿ : ಪರೋಕ್ಷವಾಗಿ ಡಿಕೆಶಿಯನ್ನ ತೆಗೆದು ಹಾಕಿ ಎಂದ ಜಾರಕಿಹೊಳಿ!

By kannadanewsnow0515/01/2025 12:43 PM

ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಡಿನ್ನರ್ ಪಾರ್ಟಿ ಭಾರಿ ಸದ್ದು ಮಾಡಿದ್ದು ಈ ವೇಳೆ ಇದಕ್ಕೆ ಬ್ರೇಕ್ ಹಾಕಲು, ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿ ಸಚಿವರಿಗೆ ಕೆಲವು ಸೂಚನೆ ನೀಡಿದ್ದರು. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಮಾಡಿ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಈ ಕುರಿತು ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಹೈಕಮಾಂಡ್ ನಿರ್ಧಾರ ಮಾಡಲಿ. ಸುರ್ಜೆವಾಲ ಜೊತೆಗೆ ಪಕ್ಷದ ಆಗುಹೋಗುಗಳು ಮತ್ತು ಸಂಘಟನೆಯ ಬಗ್ಗೆ ಚರ್ಚೆ ಮಾಡಲಾಗಿದೆ.ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ. ಅಥವಾ ಇವರನ್ನೇ ಮುಂದುವರಿಸುವುದಾದರೆ ಆ ಕುರಿತು ಸ್ಪಷ್ಟಪಡಿಸಿ ಅಂತ ಕೂಡ ಹೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ನಮಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು. ವೋಟು ತರುವವರು ಹಾಗೂ ಪಾಪ್ಯುಲರ್ ಇದ್ದವರಿಗೆ ಅಧ್ಯಕ್ಷ ಸ್ಥಾನ ನೀಡಿ. ನನ್ನನ್ನೇ ಕೆಪಿಸಿಸಿ ಅಧ್ಯಕ್ಷರಾಗಿ ಮಾಡಿ ಎಂದು ನಾನು ಕೇಳಿಲ್ಲ. ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ. ಆದರೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಕ ಮಾಡಿ ಎಂದಿದ್ದೇನೆ. ಗೊಂದಲಗಳಿಗೆ ಇತಿಶ್ರೀ ಹಾಡಿ ಎಂದು ಸುರ್ಜೆವಾಲಾಗೆ ನಾನು ಹೇಳಿದ್ದೇನೆ.

ಇವರೇ ಮುಂದುವರಿಯಬೇಕಾ ಅಥವಾ ಬೇಡವಾ ಅಂತ ಹೈಕಮಾಂಡ್ ನಿರ್ಧಾರ ಮಾಡಲಿ. ಡಿಸಿಎಂ ಡಿಕೆ ಶಿವಕುಮಾರ್ ಇರಬೇಕಾ ಬೇಡವಾ ಪಕ್ಷದ ಮೇಲ್ಮಟ್ಟದಲ್ಲಿ ಚರ್ಚೆ ಆಗಬೇಕು. ಸಚಿವರಾದ ಮೇಲೆ ಪಕ್ಷ ಸಂಘಟನೆಗೆ ಸಮಯ ಕೊಡುವವರ ಸಂಖ್ಯೆ ಕಡಿಮೆ ಆಗಿದೆ. 2023ರಲ್ಲಿ ಇದ್ದ ಸ್ಪೀಡ್ ಕಡಿಮೆಯಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವ ಸದಸ್ಯ ಆಯ್ಕೆಗಳು ಹೇಳಿಕೆ ನೀಡಿದರು.

ಬೇರೆ ಹಿರಿಯ ನಾಯಕರ ಅಭಿಪ್ರಾಯ ಕೂಡ ಅದೇ ಆಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ಅಭಿಪ್ರಾಯ ಆಲಿಸಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತಂತೆ ಅಭಿಪ್ರಾಯವನ್ನು ಸಂಗ್ರಹಿಸಿ ಸಿಎಂ, ಡಿಸಿಎಂ ಸೇರಿ ಎಲ್ಲಾ ಶಾಸಕರ ಅಭಿಪ್ರಾಯ ಆಲಿಸಿ ತೀರ್ಮಾನಿಸಿ.ಶಾಸಕರ ಅಭಿಪ್ರಾಯದಂತೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಆಗ್ರಹಿಸಿದರು.

Share. Facebook Twitter LinkedIn WhatsApp Email

Related Posts

ರಾಜ್ಯದ ಮಡಿವಾಳ ಸಮುದಾಯದವರ ಗಮನಕ್ಕೆ: 3 ಲಕ್ಷದವರೆಗೆ ಸಹಾಯಧನದಲ್ಲಿ ಮೊಬೈಲ್ ಕ್ಯಾಂಟಿನ್ ತೆರಯಲು ಅರ್ಜಿ ಆಹ್ವಾನ

20/02/2026 8:43 PM1 Min Read

ರಾಜ್ಯದ ವಿಶ್ವಕರ್ಮ ಸಮುದಾಯದವರಿಗೆ ಗುಡ್ ನ್ಯೂಸ್: 3 ಲಕ್ಷದವರೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

20/02/2026 8:40 PM1 Min Read

KSOUನಿಂದ ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

20/02/2026 8:34 PM1 Min Read
Recent News

BREAKING : ಅಮೆರಿಕ ಮಹತ್ವದ ಹೆಜ್ಜೆ ; ಮಾ.6ರಂದು ನಾಲ್ವರು ಗಗನಯಾತ್ರಿಗಳ ಸಹಿತ ‘ಚಂದ್ರಯಾನ’ಕ್ಕೆ ಸಜ್ಜು

20/02/2026 10:23 PM

CBSE ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ; ಬೋರ್ಡ್ ಪರೀಕ್ಷೆ ಬರೆಯಲು ’12-ಅಂಕಿಯ ಗುರುತಿನ ಸಂಖ್ಯೆ’ ಕಡ್ಡಾಯ

20/02/2026 9:39 PM

ಏ.1ರಿಂದ ‘NHAI’ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಗಳು ಸ್ಥಗಿತ ; FASTAG, UPI ಮೂಲಕ ಟೋಲ್ ಪಾವತಿ!

20/02/2026 9:34 PM

ಪತ್ನಿ ಇಶಾನಿ ಜೋಹರ್ ಅವರಿಂದ ಬೇರ್ಪಡುವುದಾಗಿ ಭಾರತೀಯ ಕ್ರಿಕೆಟಿಗ ರಾಹುಲ್ ಚಾಹರ್ ಘೋಷಣೆ | Rahul Chahar

20/02/2026 8:51 PM
State News
KARNATAKA

ರಾಜ್ಯದ ಮಡಿವಾಳ ಸಮುದಾಯದವರ ಗಮನಕ್ಕೆ: 3 ಲಕ್ಷದವರೆಗೆ ಸಹಾಯಧನದಲ್ಲಿ ಮೊಬೈಲ್ ಕ್ಯಾಂಟಿನ್ ತೆರಯಲು ಅರ್ಜಿ ಆಹ್ವಾನ

By kannadanewsnow0920/02/2026 8:43 PM KARNATAKA 1 Min Read

ಬೆಂಗಳೂರು: ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-2ಎ ನಲ್ಲಿ ಮಡಿವಾಳ ಸಮುದಾಯಕ್ಕೆ ಸೇರಿದ ಜನರ ಅಭಿವೃದ್ದಿಗಾಗಿ 2025-26ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ…

ರಾಜ್ಯದ ವಿಶ್ವಕರ್ಮ ಸಮುದಾಯದವರಿಗೆ ಗುಡ್ ನ್ಯೂಸ್: 3 ಲಕ್ಷದವರೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

20/02/2026 8:40 PM

KSOUನಿಂದ ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

20/02/2026 8:34 PM

ರಾಜ್ಯದಲ್ಲಿ ಹೆಚ್ಚಾದ ಬಿಸಿಲ ತಾಪ: ಈ ಸಲಹೆ ಪಾಲಿಸುವಂತೆ ‘ಆರೋಗ್ಯ ಇಲಾಖೆ’ ಸೂಚನೆ | Heat Wave

20/02/2026 8:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.