ರಾಯಚೂರು : ನಿನ್ನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ ತಿಮ್ಮಾಪುರ ಗ್ರಾಮದಲ್ಲಿ ರಾತ್ರಿ ಊಟ ಮಾಡಿ ಬೆಳಿಗ್ಗೆ ಅಷ್ಟರಲ್ಲಿ ಒಂದೇ ಕುಟುಂಬದ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಮಾತ್ರ ಬದುಕುಳಿದಿದ್ದರು. ಇದೀಗ ರಾಯಚೂರಲ್ಲಿ ಅನ್ನ ಸೇವಿಸದೆ ಇಬ್ಬರು ಮಕ್ಕಳು ಬಚಾವ್ ಆಗಿದ್ದಾರೆ. ಅನ್ನ ಸಾಂಬಾರ್ ಸೇವಿಸದೆ ಇದಿದ್ದರಿಂದ ಇಬ್ಬರು ಮಕ್ಕಳು ಬಚಾವ್ ಆಗಿದ್ದಾರೆ. ಈ ಕುರಿತು ಮಕ್ಕಳು ಪ್ರತಿಕ್ರಿಯಿಸಿ ಅಮ್ಮ ಚವಳೆಕಾಯಿ ಪಲ್ಯ ಅನ್ನ ಸಾಂಬಾರ್ ಮಾಡಿದ್ದರು. ಎಲ್ಲರು ಎಲ್ಲವನ್ನು ತಿಂದಿದ್ದರು. ನಾವು ಮಾತ್ರ ಕೇವಲ ರೊಟ್ಟಿ ಪಲ್ಯ ಮಾತ್ರ ಊಟ ಮಾಡಿದ್ವಿ ನಮಗೆ ಏನೂ ತೊಂದರೆ ಆಗಿಲ್ಲ ಎಂದು ಕೃಷ್ಣ ಮತ್ತು ಚೈತ್ರ ವಿವರ ಕೊಟ್ಟಿದ್ದಾರೆ.
ಪ್ರಕರಣ ಹಿನ್ನೆಲೆ?
ರಾಯಚೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಊಟ ಸೇವಿಸಿದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ತಂದೆ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ತಂದೆ ರಮೇಶ್ (35) ಪುತ್ರಿ ನಾಗಮ್ಮ (8) ಎಂದು ಗುರುತಿಸಲಾಗಿದೆ. . ಇನ್ನು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ದೀಪ (6) (ಮತ್ತೋರ್ವ ಪುತ್ರಿ) ಸಾವನಪ್ಪಿದ್ದಾಳೆ, ರಮೇಶ್ ಪತ್ನಿ ಪದ್ಮ ಅವರನ್ನು ರಿಮ್ಸ್ ಆಸ್ಪತ್ರೆಗೆ ಸದ್ಯ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ ಇಬ್ಬರು ಮಕ್ಕಳಾದ ಕೃಷ್ಣ, ಚೈತ್ರಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆ ನೋವಿಂದ ಬಳಲುತ್ತಿದ್ದವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.