ಬೆಂಗಳೂರು : ಈಗಾಗಲೇ ಸರಕಾರ ಕೆಎಸ್ಆರ್ಟಿಸಿ ಬಸ್ ಹಾಗು ಮೆಟ್ರೋ ಟಿಕೆಟ್ ಪ್ರಯಾಣದ ಅದರ ಏರಿಕೆ ಮಾಡಿ ರಾಜ್ಯದ ಜನರಿಗೆ ಬಿಗ್ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಳೆಯುವಂತೆ ಇದೀಗ ಮತ್ತೆ ದರ ಏರಿಕೆಯ ಶಾಕೆ ನೀಡುತ್ತಿದ್ದು, ಶೀಘ್ರದಲ್ಲಿ ನಂದಿನಿ ಹಾಲಿನ ದರ ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಪಶುಸಂಗೋಪನಾ ಸಚಿವರು ಹಾಲಿನ ದರದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳ ಜೊತೆ ಕೂಡ ಹಾಲಿನ ದರ ಏರಿಕೆ ಆಗುವ ಕುರಿತು ಚರ್ಚೆಯಾಗಿದೆ ಎಂದರು.
ಅಲ್ಲದೆ ಹಾಲಿನ ದರ ಏರಿಕೆಯಾಗುವ ಕುರಿತು ಇನ್ನು ಅಂತಿಮ ನಿರ್ಣಯ ಆಗಿಲ್ಲ. ಏರಿಕೆಯಾದಂತಹ ಅಷ್ಟು ಹಣ ರೈತರಿಗೆ ಹೋಗುತ್ತದೆ. ಹಾಲು ಉತ್ಪಾದನೆ ದರ ಹೆಚ್ಚಳವಾಗಿದೆ. ಹೆಚ್ಚುವರಿ ದರದ ಮೊತ್ತ ರೈತರಿಗೆ ತಲುಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅತಿ ಶೀಘ್ರದಲ್ಲಿ ದರ ಏರಿಕೆ ಆಗಲಿದೆ ಎಂದು ತಿಳಿಸಿದರು.