ಬಾಗಲಕೋಟೆ : ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಡುವೆ ಮತ್ತೊಂದು ಹಗರಣ ಬಯಲಿಗೆ ಬಂದಿದ್ದು,ಕಾರ್ಮಿಕ ಇಲಾಖೆಯಲ್ಲಿ ಗುತ್ತಿಗೆ ನೌಕರನೊಬ್ಬ ಕೋಟ್ಯಾಂತರ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ.
ಬಾಗಲಕೋಟೆಯ ಕಾರ್ಮಿಕ ಇಳಾಖೆಯ ಗುತ್ತಿಗೆ ನೌಕರನ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿಬಂದಿದ್ದು, ಕಾರ್ಮಿಕ ಇಲಾಖೆಯ ನೌಕರ ದ್ಯಾವಪ್ಪ ಹಣ ದುರ್ಬಳಕೆ ಮಾಡಿಕೊಂಡ ಆರೋಪಿಯಾಗಿದ್ದು, ಇಲಾಖೆಯಲ್ಲಿ 2 ಕೋಟಿ 83 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ. ಎನ್ನಲಾಗಿದೆ.
ಫಲಾನುಭವಿಗಳ ಹೆಸರಿನಲ್ಲಿ ಕಾರ್ಮಿಕ ಇಲಾಖೆಯ ಖಾತೆಯಿಂದ ೨ ಕೋಟಿ ೮೩ ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದ. ಇದೀಗ 37 ಲಕ್ಷ ಹಣ ವಾಪಸ್ ಮಾಡಿದ್ದು, ಖಾತೆಯಲ್ಲಿರುವ 26ಲಕ್ಷ ರೂ.ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ.