ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಕೊಲೆ ನಡೆದಿದ್ದು ರಾಜಸ್ಥಾನ್ ಮೂಲದ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ವರ್ತೂರು ಪೊಲೀಸ್ ಠಣ ವ್ಯಾಪ್ತಿಯಲ್ಲಿ ಈ ಒಂದು ಕೊಲೆ ನಡೆದಿದ್ದು, ತಡರಾತ್ರಿ ದಲ್ರಾಮ್ ಎನ್ನುವ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ರಾಜಸ್ಥಾನದಲ್ಲಿ ದಲ್ರಾಮ್ ಕೌಟುಂಬಿಕ ಕಲಹ ಹೊಂದಿದ್ದ. ಬೆಂಗಳೂರಿನಲ್ಲಿ ಮಾತನಾಡಲು ಬಂದು ಕೊಲೆಯಾಗಿದ್ದಾನೆ. ಗ್ಯಾಸ್ ಅಂಗಡಿ ಬಳಿಗೆ ದಲ್ರಾಮ್ ನನ್ನ ಕರೆಸಿಕೊಂಡು ದುಷ್ಪರ್ಮಿಗಳು ಕೊಲೆ ಮಾಡಿದ್ದಾರೆ ಕಾರಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳು ದಲ್ರಾಮ್ ನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








