Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

10/02/2026 7:30 PM

ಇಂದಿನಿಂದ ಮೈಸೂರು ಸ್ಯಾಂಡಲ್ ವುಡ್ ಸೋಪಿಗೆ ನಟಿ ತಮನ್ನಾ ರಾಯಭಾರಿ: 57 ಹೊಸ ಉತ್ಪನ್ನ ಬಿಡುಗಡೆ

10/02/2026 7:26 PM

“ಭಾರತ ಉಳಿದ್ರೆ ಜಗತ್ತು ಉಳಿಯುತ್ತೆ” ; RSS ಮುಖ್ಯಸ್ಥ ಮೋಹನ್ ಭಾಗವತ್

10/02/2026 7:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸರ್ಕಾರದಿಂದ ಇಂದು ‘ಕಲ್ಯಾಣ ಪಥ’ ಯೋಜನೆಗೆ ಚಾಲನೆ.!
KARNATAKA

BIG NEWS : ರಾಜ್ಯದ ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸರ್ಕಾರದಿಂದ ಇಂದು ‘ಕಲ್ಯಾಣ ಪಥ’ ಯೋಜನೆಗೆ ಚಾಲನೆ.!

By kannadanewsnow5708/03/2025 7:22 AM

ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ  ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಸಿಎಂ  ಸಿದ್ದರಾಮಯ್ಯ ಕಲ್ಯಾಣಪಥ ಯೋಜನೆಯಲ್ಲಿ 1,000 ಕೋಟಿ ರೂ. ಮೊತ್ತದಲ್ಲಿ 286 ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಘೋಷಿಸಿದ್ದಾರೆ.

ಇಂದು ಬೆಳಗ್ಗೆ 11:30ಕ್ಕೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಮೀಪ ಕಟ್ಟಿಸಂಗಾಮಿಯಲ್ಲಿ ಕಲ್ಯಾಣ ಪಥ ಯೋಜನೆಯ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಲಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ 1166 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗುವುದು. ಕೊಪ್ಪಳ, ಬಳ್ಳಾರಿ, ಬೀದರ್, ಕಲಬುರಗಿ, ರಾಯಚೂರು, ವಿಜಯನಗರ, ಯಾದಗಿರಿ ಜಿಲ್ಲೆಗಳ 1166 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಗುವುದು.

‘ನಮ್ಮ ಗ್ರಾಮ, ನಮ್ಮ ಹೊಲ’ ಯೋಜನೆ ಸ್ಥಗಿತವಾಗಿರುವುದರಿಂದ ರೈತರು ಹೊಲಕ್ಕೆ ಹೋಗುವ ದಾರಿಗಳಿಗೆ ಅವಕಾಶ ಕಲ್ಪಿಸುವ ನೀತಿಯನ್ನು ಹೊಸ ರೂಪದಲ್ಲಿ ತರುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅದು ಈ ಬಜೆಟ್‌ನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

‘ಪ್ರಗತಿಪಥ’ ಎಂಬ ವಿನೂತನ ಕಾರ್ಯಕ್ರಮದಡಿ ₹5,000 ಕೋಟಿ ಖರ್ಚು ಮಾಡಿ, ಎಲ್ಲ ಶಾಸಕರಿಗೆ ಕನಿಷ್ಠ 15 ಕಿಮೀ ರಸ್ತೆ ಅಭಿವೃದ್ಧಿ ಅವಕಾಶ ಕೊಡಬೇಕು ಸಂಕಲ್ಪ ಇಟ್ಟುಕೊಂಡಿದ್ದೇವೆ. ಇದಕ್ಕೆ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಸಮ್ಮತಿ ಸಿಕ್ಕಿದೆ. ಈ ತಿಂಗಳ ಒಳಗೆ ಇದರ ಎಲ್ಲ ಮಾನದಂಡಗಳನ್ನು ಕಾರ್ಯಕಾರಿ ಎಂಜಿನಿಯರ್‌ಗೆ ತಲುಪಿಸಿ, ಎಲ್ಲ ಶಾಸಕರ ಆದ್ಯತೆ ಮೇರೆಗೆ ಯೋಜನೆ ಜಾರಿಗೆ ತರುತ್ತೇವೆ.

ಹಾಗೆಯೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ನಾಲ್ಕನೆಯ ಹಂತದ ಮಾನದಂಡಗಳನ್ನು ಪ್ರಕಟಿಸಲಾಗಿದ್ದು, ನಮ್ಮ ರಾಜ್ಯದಲ್ಲಿ ದೊಡ್ಡ ಗ್ರಾಮಗಳಿಗೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ರಸ್ತೆಗಳು ಮಂಜೂರು ಆಗಿವೆ. ಆದರೆ ಇದರ ಮಾನದಂಡಗಳನ್ನು ಸರಳೀಕರಣ ಮಾಡಬೇಕು ಎಂದು ಕೋರಿ ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದು ಸಾಧ್ಯವಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ. ಮತ್ತೊಮ್ಮೆ ರಾಜ್ಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ. ಅವರು ಮಾನದಂಡ ಬದಲಾವಣೆ ಮಾಡದ ಕಾರಣ ‘ಪ್ರಗತಿ ಪಥ’ ಮತ್ತು ‘ಕಲ್ಯಾಣ ಪಥ’ ಯೋಜನೆಗಳನ್ನು ತಂದಿದ್ದೇವೆ. ಇದರೊಂದಿಗೆ ಗ್ರಾಮ ಸಡಕ್ ಯೋಜನೆ ಕೂಡ ಬಂದರೆ ರಾಜ್ಯದ ಗ್ರಾಮಗಳಲ್ಲಿ ಉತ್ತಮ ರಸ್ತೆ ಸಂಪರ್ಕ ಕ್ರಾಂತಿ ನಡೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

BIG NEWS: Another good news for the rural people of the state: The government will launch the 'Kalyan Patha' scheme today.
Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

10/02/2026 7:30 PM3 Mins Read

ಇಂದಿನಿಂದ ಮೈಸೂರು ಸ್ಯಾಂಡಲ್ ವುಡ್ ಸೋಪಿಗೆ ನಟಿ ತಮನ್ನಾ ರಾಯಭಾರಿ: 57 ಹೊಸ ಉತ್ಪನ್ನ ಬಿಡುಗಡೆ

10/02/2026 7:26 PM2 Mins Read

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಎಸೆದವರಿಗೆ GBA ಶಾಕ್: 3 ತಿಂಗಳಲ್ಲಿ 30 ಲಕ್ಷ ದಂಡ ವಸೂಲಿ

10/02/2026 7:17 PM1 Min Read
Recent News

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

10/02/2026 7:30 PM

ಇಂದಿನಿಂದ ಮೈಸೂರು ಸ್ಯಾಂಡಲ್ ವುಡ್ ಸೋಪಿಗೆ ನಟಿ ತಮನ್ನಾ ರಾಯಭಾರಿ: 57 ಹೊಸ ಉತ್ಪನ್ನ ಬಿಡುಗಡೆ

10/02/2026 7:26 PM

“ಭಾರತ ಉಳಿದ್ರೆ ಜಗತ್ತು ಉಳಿಯುತ್ತೆ” ; RSS ಮುಖ್ಯಸ್ಥ ಮೋಹನ್ ಭಾಗವತ್

10/02/2026 7:22 PM

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಎಸೆದವರಿಗೆ GBA ಶಾಕ್: 3 ತಿಂಗಳಲ್ಲಿ 30 ಲಕ್ಷ ದಂಡ ವಸೂಲಿ

10/02/2026 7:17 PM
State News
KARNATAKA

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

By kannadanewsnow0910/02/2026 7:30 PM KARNATAKA 3 Mins Read

ಶಿವಮೊಗ್ಗ: ರಾಜ್ಯ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ, ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಹಾರ, ತುರಾಯಿ, ನೆನಪಿನ ಕಾಣಿಗೆ…

ಇಂದಿನಿಂದ ಮೈಸೂರು ಸ್ಯಾಂಡಲ್ ವುಡ್ ಸೋಪಿಗೆ ನಟಿ ತಮನ್ನಾ ರಾಯಭಾರಿ: 57 ಹೊಸ ಉತ್ಪನ್ನ ಬಿಡುಗಡೆ

10/02/2026 7:26 PM

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಎಸೆದವರಿಗೆ GBA ಶಾಕ್: 3 ತಿಂಗಳಲ್ಲಿ 30 ಲಕ್ಷ ದಂಡ ವಸೂಲಿ

10/02/2026 7:17 PM

ಗುರು ಹೇಳಿದ ಆ ಮಾತೇ, ಯುವಕನ ಜೀವನವನ್ನೇ ಬದಲಿಸಿತು!

10/02/2026 6:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.