ಬೆಂಗಳೂರು : ಈಗಾಗಲೇ ರಾಜ್ಯ ಸರ್ಕಾರ ವಾಲ್ಮೀಕಿ, ಮುಡಾ ಹಾಗೂ ವಕ್ಫ್ ವಿವಾದದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದು, ಇದರ ಬೆನ್ನಲ್ಲೇ ಗೃಹ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಬೆಂಗಳೂರಿನ ಎರಡು ಪೊಲೀಸ್ ಠಾಣೆಗಳಲ್ಲಿ ಕಳೆದ ಆರು ತಿಂಗಳಿನಿಂದ ಇನ್ಸ್ಪೆಕ್ಟರ್ ಗಳನ್ನೇ ನೇಮಿಸಿಲ್ಲ.
ಹೌದು ಗೃಹ ಇಲಾಖೆಯಿಂದ ಮತ್ತೊಂದು ಎಡವಟ್ಟು ಆಗಿದ್ದು ಕಳೆದ 6 ತಿಂಗಳಿಂದ ಗಂಗಮ್ಮನ ಗುಡಿ ಠಾಣೆಗೆ ಇನ್ಸ್ಪೆಕ್ಟರ್ ನೇಮಕ ಮಾಡಿಲ್ಲ. 6 ತಿಂಗಳ ಹಿಂದೆ ಇನ್ಸ್ಪೆಕ್ಟರ್ ಸಿದ್ದೇಗೌಡ ನಿವೃತ್ತಿಯಾಗಿದ್ದಾರೆ. ಹಾಗಾಗಿ ಕಳೆದ 6 ತಿಂಗಳಿಂದ ಗಂಗಮ್ಮನ ಗುಡಿ ಠಾಣೆಗೆ ಇನ್ಸ್ಪೆಕ್ಟರ್ ನೇಮಿಸಿಲ್ಲ. ಅದೇ ರೀತಿಯಾಗಿ ಸೋಲದೇವನಹಳ್ಳಿ ಠಾಣೆಯಲ್ಲೂ ಕಳೆದ 3 ತಿಂಗಳಿನಿಂದ ಇನ್ಸ್ಪೆಕ್ಟರ್ ನೇಮಕವಾಗಿಲ್ಲ.
3 ತಿಂಗಳ ಹಿಂದೆಯೇ ಸೋಲದೇವನಹಳ್ಳಿಯ ಇನ್ಸ್ಪೆಕ್ಟರ್ ಹರಿಯಪ್ಪ ನಿವೃತ್ತಿಯಾಗಿದ್ದಾರೆ.
ಇದುವರೆಗೂ ಎರಡು ಠಾಣೆಗಳಿಗೆ ಇನ್ಸ್ಪೆಕ್ಟರ್ ನೇಮಕ ಮಾಡಿಲ್ಲ. ಡ್ರಗ್ಸ್, ಆಸ್ತಿ ಕಲಹ ಸೇರಿ ಹಲವು ದೂರು ನೀಡಲು ಜನರು ಠಾಣೆಗಳಿಗೆ ಬರುತ್ತಿದ್ದಾರೆ.ಎರಡು ಠಾಣೆಗಳ ಕೆಳಹಂತದ ಅಧಿಕಾರಿಗಳಿಂದ ಉಡಾಫೆ ಉತ್ತರ ನೀಡುತ್ತಿರುವ ಆರೋಪ ಇದೀಗ ಕೇಳಿಬಂದಿದೆ. ಅಲ್ಲದೇ ಕ್ರೈಮ ರೇಟ್ ಹೆಚ್ಚಾಗುತ್ತಿರುವ ಆರೋಪ ಕೂಡ ಕೇಳಿ ಬಂದಿದೆ.