ಬೆಂಗಳೂರು : ಕಳೆದೊಂದು ವಾರದಿಂದ ಇಂಡಿಗೋ ವಿಮಾ ನಯಾನ ಸಮಸ್ಯೆ ಮುಂದುವರಿದಿದ್ದು, ಭಾನುವಾರ ಇಲ್ಲಿನ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 150 ವಿಮಾನಗಳು ರದ್ದಾಗಿದ್ದವು.
ನಿಲ್ದಾಣಕ್ಕೆ ಬರುವ 76 ವಿಮಾನಗಳು ಹಾಗೂ ಇಲ್ಲಿಂದ ಹೊರಡಬೇಕಿದ್ದ 74 ವಿಮಾ ನಗಳ ಸಂಚಾರವನ್ನು ಇಂಡಿಗೋ ರದ್ದುಗೊ ಳಿಸಿತು. ಹಲವು ವಿಮಾನಗಳು ವಿಳಂಬವಾಗಿ ಆಗಮಿಸಿ, ಹೊರಟವು. ದೆಹಲಿ, ಹೈದರಾಬಾದ್, ಇಂದೋರ್, ರಾಯಪುರ್, ಕೊಲ್ಕತ್ತಾ, ಮಂಗಳೂರು ಕೊಚ್ಚಿ, ಶ್ರೀನಗರ, ಭೂಪಾಲ್, ಸೇರಿದಂತೆ ಹಲವಡೆ ತೆರಳಬೇ ಕಿದ್ದ ವಿಮಾನಗಳು ಸಂಚರಿಸುವುದಿಲ್ಲ ಎಂದು ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದರು.
12 ಗಂಟೆ ಆಸುಪಾಸಿನಲ್ಲಿ ಹೊರಡಬೇಕಿದ್ದ ವಿಮಾನಗಳು ಹಾರಾಡಲಿಲ್ಲ. 11.50ರ ಕೊಲ್ಕತ್ತಾ, 12.40ರ ಮಂಗಳೂರು, 1 ಗಂಟೆಗೆ ದೆಹಲಿ, 1.5ಕ್ಕೆ ಕೊಚ್ಚಿ ಹಾಗೂ 1.20 ರ ನಾಸಿಕ್ ವಿಮಾನ ಸೇರಿ ವಿಮಾನಗಳು ರದ್ದಾಗಿದ್ದವು. ಟ್ರಾವೆಲ್ ಏಜೆಂಟರೊಬ್ಬರು ಮಾತನಾಡಿ, ವಿಮಾನ ರದ್ದತಿಯಿಂದ ನಮಗೆ ಸಾಕಷ್ಟು ತೊಂದರೆ ಆಗಿದೆ. ನಮ್ಮಲ್ಲಿ ಬುಕ್ ಮಾಡಿರುವ ಪ್ರಯಾಣಿಕರ ಸಂಚಾರ ವ್ಯತ್ಯಯಗೊಂಡು ಪ್ರವಾರ ರದ್ದುಪಡಿಸಿದರು. ಡಿಸೆಂಬರ್ತಿಂಗಳು ಪ್ರವಾಸದ ಸಮಯ. ಇದಕ್ಕಾಗಿ ಮೂರು ನಾಲ್ಕು ತಿಂಗಳ ಮುಂಚಿ ತವಾಗಿ ಬುಕ್ ಮಾಡಿದ್ದರು. ನಮ್ಮಲ್ಲಿ ಬುಕ್ ಮಾಡಿರುವ ಗ್ರಾಹಕರು ವಿಮಾನ ನಿಲ್ದಾಣ ದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಹಕರಿಗೆ ಉತ್ತರಿಸುವುದು ಕಷ್ಟವಾಗಿದೆ ಎಂದರು.








