ಬೆಂಗಳೂರು: ಕುರುಬ ಸಮುದಾಯದ ಎಸ್ ಟಿ ಸೇರ್ಪಡೆ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ಕುರಿತು ಸೆಪ್ಟೆಂಬರ್ 16 ರ ನಾಳೆ ಮಹತ್ವದ ಸಭೆ ನಿಗದಿಯಾಗಿದೆ.
ಎಸ್ಟಿಗೆ ಸೇರಿಸುವ ಕುರಿತು ಪರಿಶಿಷ್ಟ ಪಂಗಡಗಳ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸೆ.16ರಂದು ಸಭೆ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯವನ್ನು ನಿಗದಿಯಾಗಿದೆ.
ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯವನ್ನು ಸಮಾನಾರ್ಥಕವಾದ ಗೊಂಡ ಸಮುದಾಯಕ್ಕೆ ಸೇರ್ಪಡೆ ಕುರಿತು ಈ ಸಭೆ ಚರ್ಚಿಸಲಿದೆ. ಸಭೆಯಲ್ಲಿ ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ಎಸ್ಸಿಎಸ್ಪಿ, ಟಿಎಸ್ಪಿ ನೋಡಲ್ ಏಜನ್ಸಿ ಸಲಹೆಗಾರರು ಭಾಗವಹಿಸಲಿದ್ದಾರೆ.
