ಕೋಲ್ಹಪುರ : ವಿಜಯಪುರ ಜಿಲ್ಲೆಗೆ ಬರದಂತೆ ಕೊಲ್ಹಾಪುರದ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗೆ ನಿರ್ಬಂಧ ಹೇರಿತ್ತು. ಜಿಲ್ಲಾಡಳಿತ ಕ್ರಮ ಪ್ರಶ್ನೆಸಿ ಕಾಡಸಿದ್ದೇಶ್ವರ ಸ್ವಾಮಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು. ಆದರೆ ಹೈಕೋರ್ಟ್ ಸ್ವಾಮೀಜಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತು. ಈ ವಿಚಾರವಾಗಿ ಸ್ವಾಮೀಜಿಗಳು ಕರ್ನಾಟಕದಿಂದಲೇ ನನ್ನನ್ನು ನಿರ್ಬಂಧ ಹೇರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದರಿಂದ ಏನು ಸಾಧಿಸಲಿಕ್ಕೆ ಹೊರಟಿದ್ದಾರೋ ಗೊತ್ತಿಲ್ಲ. ನನಗಿಂತ ಬಿರುಸಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿಯವರ ಕುರಿತು ಏಕವಚನದಲ್ಲಿ ಮಾತನಾಡಿದರು ಆಗ ಪತ್ರಕರ್ತರು ನೀವು ಕ್ಷಮೆ ಕೇಳಬೇಕು ಎಂದಾಗ ಆಗ ಸಿದ್ದರಾಮಯ್ಯ ನಮ್ಮ ಭಾಗದ ಭಾಷೆ ಇರೋದೇ ಹಾಗೆ. ಹಾಗಾಗಿ ಮಾತಾಡಿದ್ದೇನೆ ಎಂದು ಹೇಳಿದ್ದರು. ಆದರೆ ನನ್ನ ಬಗ್ಗೆ ಯಾಕೆ ಈ ಭಯ ಹುಟ್ಟಿಕೊಂಡಿದೆ ಗೊತ್ತಿಲ್ಲ ಎಂದು ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ನನ್ನನ್ನು ಕರ್ನಾಟಕದಿಂದಲೇ ನಿರ್ಬಂಧ ಹೇರುವ ಪ್ರಯತ್ನ ನಡೆದಿದೆ ಎನ್ನುವುದು ನನ್ನ ಕಿವಿಗೆ ಬಿದ್ದಿದೆ. ತೆರೆಮರೆಯಲ್ಲಿ ನನ್ನನ್ನು ರಾಜದಿಂದಲೇ ನಿರ್ಮಿಸುವ ಪ್ರಯತ್ನ ನಡೆದಿದೆ. ನಾನೇನು ಹುಲಿಯೋ ಸಿಂಹನೋ ಗೊತ್ತಿಲ್ಲ. ಅವರ ರಕ್ಷಣೆಗಾಗಿ ನಾವು ನಿರ್ಬಂಧ ಮಾಡಿದ್ದೇವೆ ಎಂದು ಹೈಕೋರ್ಟ್ ನಲ್ಲಿ ಡ್ರಾಮಾ ಮಾಡಿದರು.
ನನ್ನ ಸುರಕ್ಷತೆಗಾಗಿ ನಿರ್ಬಂಧ ಇರುವುದಾದರೆ ನಾನು ಕರ್ನಾಟಕಕ್ಕೆ ಬರುತ್ತೇನೆ. ನನಗೆ ನಿಮ್ಮ ಪೊಲೀಸರಿಂದಲೇ ಸುರಕ್ಷತೆ ಕೊಡಿ. ಆದರೆ ಈ ರೀತಿ ನಾಟಕ ಮಾಡಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡ್ಬೇಡಿ. ಯಾರು ಕೈಯಲ್ಲಿ ಸಂವಿಧಾನ ಹಿಡುಕೊಂಡು ಇದರ ರಕ್ಷಣೆಗಾಗಿ ನಮ್ಮನ್ನು ಆರಿಸಿ ತರಬೇಕು ಎಂದು ಹೇಳಿ ತಿರುಗಾಡಿದ್ದಾರೋ ಅವರೇ ಈ ಸಂವಿಧಾನವ ಕಗ್ಗೊಲೆ ಮಾಡುತ್ತಿದ್ದಾರೆ. ಇದೆಲ್ಲದಕ್ಕೂ ಜನರೇ ಉತ್ತರ ಕೊಡುತ್ತಾರೆ ಎಂದು ಕಾಡಸಿದ್ದೇಶ್ವರ ಶ್ರೀಗಳು ತಿಳಿಸಿದರು.