ಮೈಸೂರು : ಕೇಂದ್ರ ಸಚಿವ ಅಮಿತ್ ಷಾ ಬಿಆರ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆಗೆ ಇದೀಗ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು ಅಮಿತ್ ಶಾ ಹೇಳಿಕೆ ಖಂಡಿಸಿ ನಾಳೆ ಮೈಸೂರು ಜಿಲ್ಲೆ ಬಂದ್ ಮಾಡಿ ಹಲವು ಸಂಘಟನೆಗಳು ಕರೆ ನೀಡಿವೆ.
ಹೌದು ನಾಳೆ ಮೈಸೂರು ಬಂದ್ ಗೆ ಕರ್ನಾಟಕ ರಾಜ್ಯ ರೈತ ಸಂಘಟನೆಗಳು, ದಲಿತ ಸಂಘಟನೆಗಳು,ಮುಸ್ಲಿಂ , ಹಿಂದುಳಿದ ಸಮುದಾಯಗಳ ವೇದಿಕೆ, ದೇವರಾಜ ಮಾರುಕಟ್ಟೆ ವರ್ತಕರ ಸಂಘ,ಮೈಸೂರು ಪಾಲಿಕೆ ಪೌರಕಾರ್ಮಿಕ ಹಾಗೂ ಪಳಚರಂಡಿ ಖಾಯಂ ಹಾಗೂ ಗುತ್ತಿಗೆ ಕಾರ್ಮಿಕ ಸಂಘಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ನಾಳೆ ಮುಂಜಾನೆ 7 ಗಂಟೆಯಿಂದಲೆ ಮೈಸೂರು ಬಂದ್ ಬಿಸಿ ತಟ್ಟಲಿದ್ದು ಪ್ರತಿಭಟನೆಗೆ ಹಲವು ಸಂಘಟನೆಗಳ 10 ತಂಡ ಮಾರ್ಪಾಡು ಮಾಡಿಕೊಳ್ಳಲಾಗಿದೆ. ಕೆಂದ್ರೀಯ ಬಸ್ ನಿಲ್ದಾಣದಲ್ಲಿ ಒಂದು ತಂಡ ,ನಗರ ಬಸ್ ನಿಲ್ದಾಣದಲ್ಲಿ ಒಂದು ತಂಡ ಹೀಗೆ ಮೈಸೂರು ನಗರಕ್ಕೆ ಬರುವ ಪ್ರಮುಖ ರಸ್ತೆ ತಡೆಗೆ ಯೋಚನೆ ಮಾಡಲಾಗಿದೆ.