ಚಾಮರಾಜನಗರ : ಅಮಿತ್ ಶಾ ಒಬ್ಬ ಗೂಂಡಾ ರೌಡಿ, ಗುಜರಾತ್ ನಲ್ಲಿ ನರಮೇಧವನ್ನು ಮಾಡಿದವರು ಯಾರು? ಇಂಥವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಹುನೂರು ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಮೋದಿಯವರು ಹೇಳಿದ್ದರು.ಈಗ ಉದ್ಯೋಗ ಸೃಷ್ಟಿ ನಮ್ಮ ಹೊಣೆ ಅಲ್ಲ ಅಂತ ಹೇಳುತ್ತಿದ್ದಾರೆ. ಅಲ್ಪಸಂಖ್ಯಾತರ ನರಮೇಧ ಮಾಡಿದ್ದರು.ಅಲ್ಲದೆ ಗಡಿಪಾರು ಕೂಡ ಆಗಿದ್ರು ಅಂಥವರನ್ನು ಮೋದಿ ಅವರು ಪಕ್ಕದಲ್ಲಿ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ.
ನನಗೆ ನೂರಕ್ಕೆ ನೂರರಷ್ಟು ‘ಗ್ಯಾರಂಟಿ’ ಇದೆ ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲುತ್ತಾರೆ : ಸಿಎಂ ಸಿದ್ದರಾಮಯ್ಯ ಭವಿಷ್ಯ
ಕ್ರಿಮಿನಲ್ ಚಟುವಟಿಕೆಗಳಲ್ಲಿ ಇದ್ದವರು ಇವತ್ತು ಬಿಜೆಪಿ ಸರ್ಕಾರದ ಉನ್ನತ ಅಧಿಕಾರದಲ್ಲಿದ್ದಾರೆ. 10 ವರ್ಷಗಳಿಂದ ಅಧಿಕಾರ ಮಾಡುತ್ತಿದ್ದಾರೆ ಗುರುರಾತ್ ನಲ್ಲಿ ಅವರ ವಿರುದ್ಧ ಕೊಲೆಯ ಆರೋಪ ಕೂಡ ಇತ್ತು. ಮುಸ್ಲಿಂರ ಅಲ್ಪಸಂಖ್ಯಾತರ ನರಮೇಧ ಮಾಡಿದ ಆರೋಪ ಕೂಡ ಅವರ ಮೇಲೆ ಇದೆ.ಈ ರೀತಿ ಬಹಳಷ್ಟು ಕ್ರಿಮಿನಲ್ ಚಟುವಟಿಕೆಗಳಲ್ಲಿ ಇದ್ದವರು ಇವತ್ತು ಬಿಜೆಪಿ ಸರ್ಕಾರದ ಉನ್ನತ ಅಧಿಕಾರದಲ್ಲಿದ್ದಾರೆ.ಇಂತಹ ಅಪರಾಧ ಚಟುವಟಿಕೆಗಳನ್ನು ಮಾಡಿದವರನ್ನು ಮೋದಿ ಗ್ರೂಪ್ ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡಿದ್ದಾರೆ ಎಂದು ಡಾ. ಯತಿಂದ್ರ ಸಿದ್ದರಾಮಯ್ಯ ಅಮಿತ್ ಶಾ ವಿರುದ್ಧ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.