ಬೆಂಗಳೂರು : ನವೆಂಬರ್ ಕ್ರಾಂತಿ ನಡುವೆ ಸಿಎಂ ಸಿದ್ದರಾಮಯ್ಯ ಅವರು ಹೊಸ ದಾಖಲೆ ಬರೆಯಲು ಮುಂದಾಗಿದ್ದಾರೆ. ದೇವರಾಜ ಅರಸು ದಾಖಲೆ ಮುರಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ.
ಹೌದು, ಕರ್ನಾಟಕದ ಮುಖ್ಯಮಂತ್ರಿ ಅಗಿ ಸಿದ್ದರಾಮಯ್ಯ ಹೆಚ್ಚು ಅವಧಿ ಸೇವೆ ಸಲ್ಲಿಸಲಿದ್ದಾರೆ. ಜನವರಿ ಮೊದಲ ವಾರದ ವೇಳೆಗೆ ಅರಸು ದಾಖಲೆ ಮುರಿಯಲಿದ್ದಾರೆ. ಇನ್ನೂ 56 ದಿನಗಳು ಕಳೆದರೆ ಸಿದ್ದರಾಮಯ್ಯ ಹೆಸರಿನಲ್ಲೇ ಹೊಸ ದಾಖಲೆ ನಿರ್ಮಾಣವಾಗಲಿದೆ.
ಸದ್ಯ ದಾಖಲೆಯ ಅವಧಿಯಲ್ಲಿ ಸಿಎಂ ಆಗಿದ್ದವರು ದೇವರಾಜ ಅರಸು ಅವರು 2 ಅವಧಿ ಸೇರಿ ಹೆಚ್ಚು ದಿನಗಳ ಕಾಲ ಸಿಎಂ ಸ್ಥಾನದಲ್ಲಿದ್ದರು. 7 ವರ್ಷ 7 ತಿಂಗಳು 20 ದಿನಗಳ ಕಾಲ ದೇವರಾಜ ಅರಸು ಸಿಎಂ ಆಗಿದ್ದರು. 1972ರ ಮಾರ್ಚ್ 20ರಿಂದ 1977 ರ ಡಿಸೆಂಬರ್ 31 ರವರೆಗೆ ದೇವರಾಜ ಅರಸು ಸಿಎಂ ಆಗಿದ್ದರು. ಮೊದಲ ಅವಧಿಯಲ್ಲಿ 5 ವರ್ಷ 9 ತಿಂಗಳು 11 ದಿನ ಸಿಎಂ ಆಗಿದ್ದರು.
ಬಳಿಕ 59 ದಿನಗಳ ಕಾಲ ರಾಷ್ಟ್ರಪತಿಗಳ ಆಳ್ವಿಕೆ ಇತ್ತು. 1978 ಫೆಬ್ರವರಿ 28ರಿಂದ 1980ರ ಜ.7ರವರೆಗೆ ಅರಸು ಅವರು ಸಿಎಂ ಆಗಿದ್ದರು. ಅರಸು ಬಳಿಕ ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗಿದ್ದರು. 2ನೇ ಅವಧಿಗೂ ಸಿಎಂ ಆಗಿ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಜನವರಿ 5ಕ್ಕೆ ದೇವರಾಜ ಅರಸು ದಾಖಲೆ ಸರಿಗಟ್ಟಲಿದ್ದಾರೆ. 2026 ರ ಜ.5ಕ್ಕೆ 7 ವರ್ಷ 7 ತಿಂಗಳು 20 ದಿನ ಪೂರೈಸಲಿದ್ದಾರೆ.








