Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Sarvam Kaze:ಆಲಿಸುವ ಮತ್ತು ಪ್ರತಿಕ್ರಿಯಿಸುವ ಭಾರತ ನಿರ್ಮಿತ AI ಚಾಲಿತ ಸ್ಮಾರ್ಟ್ ಕನ್ನಡಕವನ್ನು ಪರಿಶೀಲಿಸಿದ ಪ್ರಧಾನಿ ಮೋದಿ !

18/02/2026 7:25 AM

BIG NEWS: ಇನ್ಮುಂದೆ ‘ಶಾಲಾ ಶಿಕ್ಷಕರ ಹಾಜರಾತಿ’ಗೆ ‘ಫೇಸ್ ರೆಕಾಗ್ನಿಷನ್’ ಕಡ್ಡಾಯ: ‘ಶಿಕ್ಷಕರ ಕಳ್ಳಾಟ’ಕ್ಕೆ ಸರ್ಕಾರ ಬ್ರೇಕ್

18/02/2026 7:25 AM

ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಲು `ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ

18/02/2026 7:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಶಾಲೆಗಳು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ` ವರ್ಗಾವಣೆ ಪ್ರಮಾಣ ಪತ್ರ’ (TC) ವಿತರಿಸಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ` ವರ್ಗಾವಣೆ ಪ್ರಮಾಣ ಪತ್ರ’ (TC) ವಿತರಿಸಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow5728/11/2025 5:00 AM

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವರ್ಗಾವಣೆ ಪ್ರಮಾಣ ಪತ್ರವನ್ನು ಸಕಾಲದಲ್ಲಿ ವಿತರಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯದಲ್ಲಿನ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಸಕಾಲದಲ್ಲಿ ವಿತರಿಸದೇ ಕಾಲಹರಣ ಮಾಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಅಧಿಕೃತವಾಗಿ ಶಾಲೆಗೆ ದಾಖಲಾಗದೇ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿ ಆತಂಕದಲ್ಲಿ ಸಿಲುಕಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಹಲವಾರು ದೂರು ಸಲ್ಲಿಸಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ-2005ರ ಸೆಕ್ಷನ್ 13(ಜೆ) ರಡಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ದೂರುಗಳನ್ನು ಆಯೋಗವು ಸ್ವೀಕರಿಸಿ, ವಿಚಾರಣೆ ನಡೆಸುತ್ತಿದೆ.

ವಿದ್ಯಾರ್ಥಿಗಳ ವರ್ಗಾವಣೆ ಪತ್ರ ವಿತರಣೆ ಸಂಬಂಧ ರಾಷ್ಟ್ರದ ವಿವಿಧ ರಾಜ್ಯಗಳ ರಾಜ್ಯ ಉಚ್ಚನ್ಯಾಯಾಲಯಗಳಲ್ಲಿ ದಾಖಲಾಗಿರುವ ದಾವೆಗಳ ತೀರ್ಪಿನ ಅಡಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯಿಂದ ವಂಚಿತರಾಗದಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸಲು ಪೋಷಕರು ಬಯಸಿದಲ್ಲಿ “ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009″ ಸೆಕ್ಷನ್ 5(1)ರ ಉಲ್ಲಂಘನೆಯಾಗದಂತೆ, ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ವರ್ಗಾವಣೆ ಪತ್ರವನ್ನು ವಿತರಿಸುವುದು ಶಾಲಾ ಮುಖ್ಯಸ್ಥರ ಅದ್ಯ ಕರ್ತವ್ಯವಾಗಿರುತ್ತದೆ.

ಶಾಲಾ ಮುಖ್ಯಸ್ಥರು ಸಕಾಲದಲ್ಲಿ ವರ್ಗಾವಣೆ ಪತ್ರವನ್ನು ವಿತರಿಸದಿದ್ದಲ್ಲಿ ಪೋಷಕರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸತಕ್ಕದ್ದು. ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸದರಿ ಶಾಲಾ ಮುಖ್ಯಸ್ಥರಿಗೆ ಒಂದು ವಾರ ಕಾಲಾವಕಾಶ ನೀಡಿ, ಮನವಿಯನ್ನು ಇತ್ಯರ್ಥಪಡಿಸಲು ಕ್ರಮವಹಿಸತಕ್ಕದು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಕಾಲಾವಧಿಯಲ್ಲಿ ವರ್ಗಾವಣೆ ಪತ್ರವನ್ನು ವಿತರಿಸಲು ಶಾಲೆಯು ವಿಫಲವಾದಲ್ಲಿ, ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಮುಖ್ಯಸ್ಥರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 106(2)(ಬಿ)ರಡಿ ಸಕ್ಷಮ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ಕ್ರಮವಹಿಸಿ, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗದಂತೆ ಕ್ರಮವಹಿಸಲು ಸೂಚಿಸಿದೆ.

BIG NEWS: All schools in the state to issue 'Transfer Certificate' (TC) to students on time: Important order from the Education Department
Share. Facebook Twitter LinkedIn WhatsApp Email

Related Posts

BIG NEWS: ಇನ್ಮುಂದೆ ‘ಶಾಲಾ ಶಿಕ್ಷಕರ ಹಾಜರಾತಿ’ಗೆ ‘ಫೇಸ್ ರೆಕಾಗ್ನಿಷನ್’ ಕಡ್ಡಾಯ: ‘ಶಿಕ್ಷಕರ ಕಳ್ಳಾಟ’ಕ್ಕೆ ಸರ್ಕಾರ ಬ್ರೇಕ್

18/02/2026 7:25 AM6 Mins Read

ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಲು `ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ

18/02/2026 7:20 AM3 Mins Read

BIG NEWS : ರಾಜ್ಯದ `ಆರೋಗ್ಯ ಕವಚದ ಆಂಬುಲೆನ್ಸ್ ಚಾಲಕ’ರಿಗೆ ಬೋನಸ್ : ಸರ್ಕಾರದಿಂದ ಮಹತ್ವದ ಘೋಷಣೆ

18/02/2026 6:58 AM4 Mins Read
Recent News

Sarvam Kaze:ಆಲಿಸುವ ಮತ್ತು ಪ್ರತಿಕ್ರಿಯಿಸುವ ಭಾರತ ನಿರ್ಮಿತ AI ಚಾಲಿತ ಸ್ಮಾರ್ಟ್ ಕನ್ನಡಕವನ್ನು ಪರಿಶೀಲಿಸಿದ ಪ್ರಧಾನಿ ಮೋದಿ !

18/02/2026 7:25 AM

BIG NEWS: ಇನ್ಮುಂದೆ ‘ಶಾಲಾ ಶಿಕ್ಷಕರ ಹಾಜರಾತಿ’ಗೆ ‘ಫೇಸ್ ರೆಕಾಗ್ನಿಷನ್’ ಕಡ್ಡಾಯ: ‘ಶಿಕ್ಷಕರ ಕಳ್ಳಾಟ’ಕ್ಕೆ ಸರ್ಕಾರ ಬ್ರೇಕ್

18/02/2026 7:25 AM

ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಲು `ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ

18/02/2026 7:20 AM

ಆಸ್ಟ್ರೇಲಿಯಾ, ಫ್ರಾನ್ಸ್ ಆಯ್ತು, ಈಗ ಭಾರತದ ಸರದಿ: ಅಪ್ರಾಪ್ತರಿಗೆ ಜಾಲತಾಣದ ಪ್ರವೇಶ ಬಂದ್?

18/02/2026 7:08 AM
State News
KARNATAKA

BIG NEWS: ಇನ್ಮುಂದೆ ‘ಶಾಲಾ ಶಿಕ್ಷಕರ ಹಾಜರಾತಿ’ಗೆ ‘ಫೇಸ್ ರೆಕಾಗ್ನಿಷನ್’ ಕಡ್ಡಾಯ: ‘ಶಿಕ್ಷಕರ ಕಳ್ಳಾಟ’ಕ್ಕೆ ಸರ್ಕಾರ ಬ್ರೇಕ್

By kannadanewsnow0918/02/2026 7:25 AM KARNATAKA 6 Mins Read

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು, ಅಧಿಕಾರಿಗಳು ಬೋಧಕೇತರ ಸಿಬ್ಬಂದಿ, ಅಧಿಕಾರಿಗಳು ಕೆಎಎಎಂಎಸ್…

ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಲು `ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ

18/02/2026 7:20 AM

BIG NEWS : ರಾಜ್ಯದ `ಆರೋಗ್ಯ ಕವಚದ ಆಂಬುಲೆನ್ಸ್ ಚಾಲಕ’ರಿಗೆ ಬೋನಸ್ : ಸರ್ಕಾರದಿಂದ ಮಹತ್ವದ ಘೋಷಣೆ

18/02/2026 6:58 AM

BIGG NEWS: ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ‘KAAMS ಮೊಬೈಲ್ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

18/02/2026 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.