ಬೆಂಗಳೂರು : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಬಂದ್ ಹಿನ್ನೆಲೆ ಬೆಂಗಳೂರಲ್ಲಿ ಖಾಸಗಿ ಬಸ್, ವಾಹನಗಳು, ಓಲಾ ಉಬರ್ ಹೋರಾಟ ಸ್ಥಗಿತವಾಗಿದ್ದು, ಕೆಎಸ್ಆರ್ಟಿಸಿ ಬಿಎಂಟಿಸಿ ಸಂಚಾರ ಇರುತ್ತದೆ ಆದರೂ ಕೂಡ ಅದರಲ್ಲೂ ಇನ್ನು ಗೊಂದಲ ಇದೆ. ಮಧ್ಯಾಹ್ನದವರೆಗೆ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಗಳು ಕ್ಯಾನ್ಸಲ್ ಆಗಿದ್ದು, ಟೌನ್ ಹಾಲಿನಿಂದ ಬೆಳಿಗ್ಗೆ 6 ಗಂಟೆಯಿಂದ ಬೃಹತ್ ರ‍್ಯಾಲಿ ನಡೆಯಲಿದೆ. ಹಾಗಾಗಿ ಬೆಳಿಗ್ಗೆಯಿಂದಲೇ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ.
ಏನಿರಲ್ಲ?
ಬಂದ್ ವೇಳೆಯಲ್ಲಿ ಹೋಟೆಲ್ ಕ್ಲೋಸ್
ಸಿನಿಮಾ ಥಿಯೇಟರ್ ಬಂದ್
ಸರ್ಕಾರಿ ಕಚೇರಿಗಳು ತೆರೆದಿರೋದು ದೌಟ್
ಸಾರಿಗೆ ಬಸ್ ಸಂಚಾರ ಇರಲ್ಲ.
ಓಲಾ, ಉಬರ್, ಆಟೋ, ಲಾರಿ ಸಂಚಾರ ಬಹುತೇಕ ಸ್ಥಗಿತ.
ಮಾಲ್ ಗಳು ಕ್ಲೋಸ್
ಏನಿರುತ್ತೆ.?
ಮೆಡಿಕಲ್ ಶಾಪ್ ಓಪನ್
ಹಾಲಿನ ಬೂತ್ ಗಳು ತೆರೆದಿರುತ್ತೆ
ಹಣ್ಣು-ತರಕಾರಿ ಅಂಗಡಿ ಓಪನ್
ಅಗತ್ಯ ವಸ್ತುಗಳ ಪೂರೈಕೆ ಸೇವೆ ಎಂದಿನಂತೆ ಇರಲಿದೆ
ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ ಆಗೋದು ಕಡಿಮೆ
ಇನ್ನು ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ‘ಕನ್ನಡ ಒಕ್ಕೂಟ- ಕರ್ನಾಟಕ ರಾಜ್ಯ’ದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ‘ಕರ್ನಾಟಕ ಬಂದ್’ಗೆ ಕರೆ ನೀಡಿದ್ದು ಗೊತ್ತೇ ಇದೆ. ಮಾರ್ಚ್ 22 ರಂದು ನಡೆಯಲಿರುವ ಅಖಂಡ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲ ಇಲ್ಲ ಎಂದು ಚಾಲಕರ ಒಕ್ಕೂಟ ತಿಳಿಸಿದೆ.ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಬಂದ್‌ಗೆ ಬೆಂಬಲ ಇಲ್ಲ ಎಂದರು.
ಈ ಬಂದ್ ಚಾಲಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವಂತಿದೆ. ಬೆಂಗಳೂರಿನಲ್ಲಿ 75 ಸಾವಿರಕ್ಕೂ ಅಧಿಕ ಆಟೋಗಳು ಸಂಚರಿಸುತ್ತಿವೆ. 2.5 ಲಕ್ಷಕ್ಕೂ ಅಧಿಕ ಕುಟುಂಬಗಳು ಚಾಲಕ ವೃತ್ತಿಯನ್ನು ಅವಲಂಬಿಸಿದ್ದಾರೆ. ಬಂದ್ ನಿಂದ ಇವರ ಬದಕು ದುಸ್ತರವಾಗಲಿದೆ. ಔಷಧ, ತರಕಾರಿ, ಹಾಲು, ಅಗತ್ಯ ವಸ್ತುಗಳ ಸಾಗಾಣೆ, ಶಾಲಾ ವಾಹನಗಳು ಸೇವೆ ಸ್ಥಗಿತಗೊಳಿಸಿದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಅವರು ವಿವರಿಸಿದರು.