ಬೆಂಗಳೂರು : ಬೆಂಗಳೂರಿನಲ್ಲಿ ಇದೆ ಜನವರಿ 23 ರಿಂದ ಫೆಬ್ರವರಿ 17ರ ವರೆಗೆ ಏರ್ ಶೋ ಆ ಯೋಜನೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ, ಯಲಹಂಕದ ಸುತ್ತಮುತ್ತಲೂ ಇದೀಗ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಮಾಂಸ ಮಾರಾಟ ನಿಷೇಧ ಮಾಡಿ ಪಾಲಿಕೆ ಆದೇಶ ಹೊರಡಿಸಿದೆ.
ಜನವರಿ 23ರಿಂದ ಫೆಬ್ರವರಿ 17ರವರೆಗೂ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ. ವಾಯುನೆಲೆಯಲ್ಲಿ ವಿಮಾನಗಳ ರಿಹರ್ಸಲ್ ನಡೆಸಲಿವೆ. ಬೆಂಗಳೂರಲ್ಲಿ ಫೆಬ್ರವರಿಯಲ್ಲಿ ಏರ್ ಶೋ ಹಿನ್ನೆಲೆಯಲ್ಲಿ ಯಲಹಂಕದ ಸುತ್ತಮುತ್ತ ಮಾಂಸ ಮಾರಾಟಕ್ಕೆ ನಿಷೇಧಿಸಲಾಗಿದೆ. ಯಲಹಂಕದ ಸುಮಾರು 13 ಕಿಲೋ ಮೀಟರ್ ಸುತ್ತಲೂ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ.
ಮಾಂಸ ಮಾರಾಟ ಹಾಗೂ ಉದ್ದಿಮೆಗಳ ಬಂದ್ಗೆ ಸೂಚನೆ ನೀಡಲಾಗಿದೆ. ಫೆಬ್ರವರಿ 10 ರಿಂದ 14ರ ವರೆಗೂ ಈ ಒಂದು ಏರ್ ಶೋ ನಡೆಯಲಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತರು ಸೂಚನೆ ನೀಡಿದ್ದಾರೆ.