ಬೆಂಗಳೂರು : ಫೆಬ್ರವರಿ 10ರಿಂದ 14 ರವರೆಗೆ ಬೆಂಗಳೂರಿನಲ್ಲಿ ಏರ್ ಶೋ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಹಲವಡೆ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಫೆಬ್ರುವರಿ 10 ರಿಂದ ಬೆಳಿಗ್ಗೆ 5 ರಿಂದ ಫೆಬ್ರವರಿ 14ರ ರಾತ್ರಿ 10 ರವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಏರ್ಪೋರ್ಟ್ ರಸ್ತೆ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದಲ್ಲಿರುವ ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ, ಹಾಗೂ ಬಾಗಲೂರು ಮುಖ್ಯರಸ್ತೆಯನ್ನು ಏಕಮುಖ ರಸ್ತೆಯಾಗಿ ಬದಲಾವಣೆ ಮಾಡಲಾಗಿದೆ. ಜಿಕೆವಿಕೆ ಕ್ಯಾಂಪಸ್ ನಲ್ಲಿ ಸಾರ್ವಜನಿಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಕೆವಿಕೆ ಪಾರ್ಕಿಂಗ್ ಸ್ಥಳದಿಂದ ಉಚಿತ ಬಿಎಂಟಿಸಿ ಎಸಿ ಬಸ್ ಕೂಡ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ಪೂರ್ವ ದಿಕ್ಕಿನಿಂದ ಬರುವ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಮಾಹಿತಿ ನೀಡಿದ್ದು, ಕೆಆರ್ ಪುರ, ಬಾಗಲೂರು, ಹೆಣ್ಣೂರು ಕ್ರಾಸ್, ಕೊತ್ತನೂರು, ಕಣ್ಣೂರು, ಆರ್. ಪಾಳ್ಯ, ವಿದ್ಯಾನಗರ ಕ್ರಾಸ್, ಹುಣಸಮಾರನಹಳ್ಳಿ, ಗುಬ್ಬಿ ಕ್ಲಾಸ್, ಕಣ್ಣೂರು, ಆರ್ ಪಾಳ್ಯ ವಿದ್ಯಾನಗರ ಕ್ರಾಸ್, ಹುಣಸಮಾರನಹಳ್ಳಿ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ.
ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವ ವಾಹನಗಳು ಗೊರಗುಂಟೆ ಪಾಳ್ಯ, ಉನ್ನಿನ್ ಕೃಷ್ಣನ್ ರಸ್ತೆ, ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಎಂ ಎಸ್ ಪಾಳ್ಯ ಸರ್ಕಲ್, ಮದರ್ ಡೈರಿ, ದೊಡ್ಡಬಳ್ಳಾಪುರ ರಸ್ತೆ, ನಾಗೇನಹಳ್ಳಿ ಗೇಟ್ ಮೂಲಕ ಗಂಟೆಗಾನಹಳ್ಳಿ ಸರ್ಕಲ್ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.