ರಾಮನಗರ : ಕನ್ನಡಿಗರ ಮೇಲೆ ಮತ್ತೆ ಪದೇಪದೇ ಅನ್ಯ ಭಾಷೆ ಕರ ದಬ್ಬಾಳಿಕೆ ಮುಂದುವರೆದಿದೆ , ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಕನ್ನಡದಲ್ಲಿ ವಿವರಿಸಿದ ಕ್ಕೆ ಲೆಕ್ಚರರ್ ಒಬ್ಬರನ್ನು ಕಾಲೇಜು ಅಮಾನತು ಮಾಡಿತ್ತು. ಬಳಿಕ ಮತ್ತೆ ಅವರನ್ನು ಕೆಲಸಕ್ಕೆ ಸೇರಿಸಿಕೊಂಡ ಘಟನೆ ನಡೆದಿತ್ತು. ಇದೀಗ ರಾಮನಗರದಲ್ಲಿ ಕರ್ನಾಟಕದ ಬ್ಯಾಡ್ಜ್ ಧರಿಸಿಕೊಂಡು ಹೋಗಿದ್ದಕ್ಕೆ ಕಂಪನಿಯ ಎಂಡಿ ಒಬ್ಬ ಕೆಲಸಕ್ಕೆ ಬರಬೇಡ ಎಂದು ಹೇಳಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಹೌದು ಹೌದು ಕರ್ನಾಟಕದಲ್ಲಿ ಕನ್ನಡ, ಕನ್ನಡಿಗರ ಮೇಲೆ ಪರಭಾಷಿಕರ ದಬ್ಬಾಳಿಕೆ ಹೆಚ್ಚಾಗುತ್ತಿವೆ ಎನ್ನುವ ಆಕ್ರೋಶ ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ಸಂಬಂಧಿಸಿದ ಹಲವು ಘಟನೆಗಳು ದಿನಬೆಳಗಾದರೆ ರಾಜ್ಯದಲ್ಲಿ ನೋಡುತ್ತಿದ್ದೇವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ಪರಭಾಷಿಕರ ದರ್ಪ ಮಿತಿ ಮೀರಿದೆ.ಇದೀಗ ರಾಮನಗರದಲ್ಲಿ ಕರ್ನಾಟಕದ ಬ್ಯಾಡ್ಜ್ ಹಾಕಿಕೊಂಡಿದ್ದ ಅದಕ್ಕೆ ತಮಿಳುನಾಡಿನ ಕಂಪನಿಯ ಎಂ.ಡಿ ಕೆಲಸಕ್ಕೆ ಬರಬೇಡ ಅಂತ ಹೇಳಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ನನ್ನ ಹೆಸರು ಕಾರ್ತಿಕ್, ನಾನು ರಾಮನಗರ ಬಳಿ ಇರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಕೆಲ ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದೆ. ನಾನು ಇಲ್ಲಿ ಕೆಲಸ ಮಾಡುವಾಗ ಕನ್ನಡಿಗರ ಹೆಮ್ಮೆಯ ಗುರುತಾದ ಕರ್ನಾಟಕದ ಬಿಲ್ಲೆ (ಬ್ಯಾಡ್ಜ್) ಅನ್ನು ಧರಿಸಿದ್ದೆ. ಇದನ್ನು ಕಂಡು ಈ ಕಂಪನಿ ವ್ಯವಸ್ಥಾಪಕ ನಿರ್ದೇಶಕರು ಕೂಡಲೇ ಇದನ್ನು ತೆಗೆಯುವಂತೆ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಈ ಬ್ಯಾಡ್ಜ್ ಅನ್ನು ನನ್ನಿಂದ ಬಲವಂತವಾಗಿ ತೆಗೆಸಿದರು. ಈ ಬಿಲ್ಲೆ ಇರುವುದರಿಂದ ಇವರಿಗೆ ಏನು ತೊಂದರೆ? ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೊನೆಗೆ ನಾನು ಇದರ ಬಗ್ಗೆಯೂ ಅವರನ್ನು ಕೇಳಿದೆ. ಇಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡುತ್ತೇನೆ. ಇದು ನನ್ನ ಎದೆಯ ಮೇಲಿದ್ದರೆ ಏನು ಸಮಸ್ಯೆ ಎಂದು ಕೇಳಿದ್ದಕ್ಕೆ, ಇದೆಲ್ಲ ಇಲ್ಲಿಗೆ ಹಾಕ್ಕೊಂಡು ಬರುವಂತಿಲ್ಲ ಎಂದು ಜೋರು ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ಇಲ್ಲಿ ಹೆಚ್ಚಾಗಿ ತಮಿಳಿಗರು ಹಾಗೂ ಕ್ರೈಸ್ತರೇ ಇದ್ದಾರೆ. ಈ ಕಂಪನಿಯಿಂದ ಸುತ್ತಮುತ್ತ ಇರುವ ಹಳ್ಳಿಯವರಿಗೂ ಪ್ರಯೋಜನ ಆಗುತ್ತಿದೆ. ಹಾಗಾಗಿ ನಾನು ಈ ಕಂಪನಿ ಬಗ್ಗೆ ಏನೂ ಕೆಟ್ಟದಾಗಿ ಮಾತನಾಡುತ್ತಿಲ್ಲ. ಆದರೆ, ಇದರ ಎಂಡಿ ಅಶೋಕ್ ಎಂಬುವವರು ಈ ಬ್ಯಾಡ್ಜ್ ತೆಗೆಯದಿದ್ದರೆ ಸೋಮವಾರದಿಂದ ಕೆಲಸಕ್ಕೇ ಬರಬೇಡ ಎಂದು ಧಮ್ಕಿ ಹಾಕಿದ್ದಾರೆ’ ಎಂದು ಕಾರ್ತಿಕ್ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ