ದಾವಣಗೆರೆ : ಸದ್ಯ ಕರ್ನಾಟಕದಲ್ಲಿ ಒಂದು ಕಡೆ ಮೂರು ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಪ್ರಚಾರ ಬಲು ಜೋರಾಗಿದ್ದು ಮತ್ತೊಂದು ಕಡೆ ವಕ್ಫ್ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಹಿಂದೂ ಮಠಗಳು ಆಯ್ತು ಸರ್ಕಾರಿ ಶಾಲೆಗಳು ಆಯ್ತು, ಸರ್ಕಾರಿ ಕಚೇರಿಗಳು ಸಹ ಆಯ್ತು ಇದೀಗ ದಾವಣಗೆರೆಯಲ್ಲಿ ಗೋಮಾಳದ ಜಾಗದ ಮೇಲೆ ವಕ್ಫ್ ಕಣ್ಣು ಬಿದ್ದಿದೆ.
ಹೌದು ದಾವಣಗೆರೆ ಜಿಲ್ಲೆಯಲ್ಲಿ ಗೋಮಾಳ ಜಾಗದ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ವಕ್ಫ್ ಬೋರ್ಡ್ ವಿರುದ್ಧ ನೀಲನಹಳ್ಳಿ ಗ್ರಾಮಸ್ಥರು ಇದೀಗ ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ತಾಲೂಕಿನ ನೀಲನಹಳ್ಳಿ ಈ ಒಂದು ಘಟನೆ ಬೆಳಕಿಗೆ ಬಂದಿದೆ. 2020 ರ ಜನವರಿ 27 ರಂದು ವಕ್ಫ್ ಆಸ್ತಿ ಎಂದು ನಮೂದು ಆಗಿದೆ.
ದಾವಣಗೆರೆಯ ಎಸಿ ಆದೇಶ ಹಿನ್ನೆಲೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ. ಹಾಗಾಗಿ ಈ ಕುರಿತು ಸೂಕ್ತವಾದಂತಹ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಈ ಒಂದು ವಕ್ಫ್ ವಿವಾದದಿಂದ ಸಚಿವ ಜಮೀರ್ ಅಹ್ಮದ್ ಮುಜುಗರಕ್ಕೆ ಒಳಗಾಗಿದ್ದು ಚುನಾವಣಾ ಪ್ರಚಾರದಿಂದಲೂ ಕೂಡ ಅವರು ದೂರ ಉಳಿದಿದ್ದಾರೆ.