ಬೆಂಗಳೂರು : ಇತ್ತೀಚೆಗೆ ರಾಜ್ಯ ಸರ್ಕಾರ ಹಾಲು ಪೆಟ್ರೋಲ್ ಹಾಗೂ ತರಕಾರಿ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿತ್ತು. ಇದರಿಂದ ಗ್ರಾಹಕರು ಸಹಜವಾಗಿ ಆಕ್ರೋಶ ಹೊರಹಾಕಿದ್ದರು. ಇದರ ಮಧ್ಯ ಇದೀಗ ಅಡುಗೆ ಎಣ್ಣೆ ಬೆಲೆ ಕೂಡ ಏರಿಕೆ ಮಾಡಿ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು ಸದ್ಯ ಅಡುಗೆ ಎಣ್ಣೆ ಬೆಲೆ ಲೀಟರ್ ಗೆ 20 ರೂಪಾಯಿ ಹೆಚ್ಚಳ ಮಾಡಿದ್ದೂ, ಇದರಿಂದ ಗ್ರಾಹಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈಗಾಗಲೇ ಹಾಲು, ಪೆಟ್ರೋಲ್ ಏರಿಕೆಯಿಂದ ಕಂಗಾಲಾಗಿದ್ದೇವೆ, ಇದೀಗ ಅಡುಗೆ ಬೆಲೆ ಏರಿಕೆ ಆದರೆ ನಾವು ಎಲ್ಲಿ ಹೋಗಬೇಕು ಎಂದು ಗ್ರಾಹಕರು ಒಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಗೃಹಿಣಿ ಒಬ್ಬರು ಕೇವಲ ದಿನ ಬಳಕೆ ವಸ್ತುಗಳ ಬೆಳೆ ಏರಿಕೆ ಆಗುತ್ತಿದೆ ಹೊರತು ನಮ್ಮ ವೇತನ ಮಾತ್ರ ಅಷ್ಟೇ ಇದೆ ಹೀಗಾದರೆ ನಾವು ಜೀವನ ನಡೆಸುವುದಾದರೂ ಹೇಗೆ? ಕೂಡಲೇ ದಿನಬಳಕೆ ವಸ್ತುಗಳ ಮೇಲೆ ಹೆಚ್ಚಳ ಮಾಡಿರುವಂತಹ ದರ ಇಳಿಸಬೇಕು ಎಂದು ಅವರು ಆಗ್ರಹಿಸಿದರು.
ಹಳೆ ಮತ್ತು ಹೊಸ ಎಣ್ಣೆ ದರ ಹೀಗಿದೆ
1) ಸನ್ ಪ್ಯೂರ್ ಆಯಿಲ್: 108 (ಹಳೆಯ ದರ), 126 ರೂ. (ಈಗಿನ ದರ)
2) ಗೋಲ್ಡ್ ವಿನ್ನರ್: 110 (ಹಳೆಯ ದರ), 126 ರೂ (ಈಗಿನ ದರ)
3) ಫ್ರೀಡಂ: 110 (ಹಳೆಯ ದರ), 124 ರೂ (ಈಗಿನ ದರ)
4) ರುಚಿ ಗೋಲ್ಡ್: 96 (ಹಳೆಯ ದರ), 112 ರೂ (ಈಗಿನ ದರ)
5) ಜೆಮಿನಿ ಸನ್ ಫ್ಲವರ್: 112 (ಹಳೆಯ ದರ), 127 ರೂ (ಈಗಿನ ದರ)
6) ಫಾರ್ಚುನ್: 111 (ಹಳೆಯ ದರ), 126 ರೂ (ಈಗಿನ ದರ)
7) ಧಾರಾ: 116 (ಹಳೆಯ ದರ), 130 ರೂ (ಈಗಿನ ದರ)