ಶಿವಮೊಗ್ಗ : ಧಾರವಾಡದಲ್ಲಿ ಹುಚ್ಚು ನಾಯಿ ಕಡಿತ ಬೆನ್ನಲ್ಲೆ, ಹೊಳೆಹೊನ್ನೂರಲ್ಲಿ ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿದಿದೆ. ಎಲ್ಲರಿಗೂ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿ ನಾಯಿಗಳನ್ನು ನಿಯಂತ್ರಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಗರದ ಬಹುತೇಕ ವಾರ್ಡ್‍ಗಳಲ್ಲಿ ಒಟ್ಟಾರೆಯಾಗಿ ನೂರಾರು ಬೀದಿನಾಯಿಗಳಿವೆ. ಇದರಿಂದ ಹಲವು ದಿನಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಇಂದು ಒಂದೇ ದಿನ ಇಷ್ಟೊಂದು ಮಂದಿಗೆ ಬೀದಿ ನಾಯಿಗಳು ಕಡಿದಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಈ ಬೀದಿ ನಾಯಿಗಳನ್ನು ಸೆರೆ ಹಿಡಿಸಿ, ಅವುಗಳಿಗೆ ದೂರದಲ್ಲಿ ಶೆಡ್ ಮಾಡಿ ಇರಿಸಬೇಕು. ಸಾರ್ವಜನಿಕರ ಜೀವಕ್ಕೆ ಮಾರಕವಾಗಿರುವ ಬೀದಿ ನಾಯಿಗಳಿಂದ ಮುಕ್ತಿ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.








