ಬೆಂಗಳೂರು : ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುಷ್ಕರ್ಮಿ ಒಬ್ಬ ಹಸುಗಳ ಕೆಚ್ಚಲು ಕೊಯ್ದಿದ್ದ ಘಟನೆ ನಡೆದಿತ್ತು. ಘಟನೆ ಸಂಭಂದ ಎಂದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ ಈ ಒಂದು ಘಟನೆ ವಾಸುವ ಮುನ್ನವೇ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯ ಬಳಿ ಹಾಡು ಹಗಲೇ ಮೇಯುತ್ತಿದ್ದ ಲಕ್ಷಾಂತರ ಮೌಲ್ಯದ ಎರಡು ಹಸುಗಳನ್ನು ಕಳ್ಳತನ ಮಾಡಲಾಗಿದೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿಣ ಕುಂಟೆಯ ಬಳಿ ಹಾಡು ಹಗಲೇ ಮೇಯುತಿದ್ದ ಎರಡು ಹಸುಗಳನ್ನು ಕಳ್ಳತನ ಮಾಡಲಾಗಿದೆ. ಒಂದುವರೆ ಲಕ್ಷ ಮೌಲ್ಯದ ಜರ್ಸಿ ಹಸು ಹಾಗೂ ಮಲೆನಾಡಿನ ಗಿಡ್ಡ ತಳಿಯ ಹಸು ಕಳ್ಳತನ ಮಾಡಲಾಗಿದೆ.ಎರಡು ಹಸು ಕಳೆದುಕೊಂಡು ಸದ್ಯ ರೈತರ ರಾಮಕೃಷ್ಣ ಕಂಗಾಲಾಗಿದ್ದಾರೆ. ಈ ಕುರಿತು ನೆಲಮಂಗಲದ ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.