ತುಮಕೂರು : ಮಾಜಿ ಸಂಸದೆ ಹಾಗೂ ಹಿರಿಯ ನಟಿ ಬಿ ಜಯಶ್ರೀ ಅವರನ್ನು ಭೂಮಾಪನ ಇಲಾಖೆ ಅಧಿಕಾರಿ ಒಬ್ಬ ಅಲೆದಾಡಿಸಿದ ಘಟನೆ ವರದಿಯಾಗಿದೆ. ಸರ್ವೆಗಾಗಿ ಬಿ.ಜಯಶ್ರೀ ಅವರನ್ನು ಅಲೆದಾಡಿಸಿದ ಘಟನೆ ವರದಿಯಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಭೂ ಮಾಪನ ಕಚೇರಿಗೆ ಬಿ ಜಯಶ್ರೀ ಅಲೆದಾಡಿದ್ದಾರೆ. ಜೀ.ವಿ ಮಾಲತಮ ಆರ್ಟ್ ಟ್ರಸ್ಟಿಗೆ ಐದು ಗುಂಟೆ ಜಮೀನು ದಾನ ಮಾಡಿದ್ದರು. ಗುಬ್ಬಿಯಲ್ಲಿ ರಂಗ ಚಟುವಟಿಕೆಗಾಗಿ 5 ಗುಂಟೆ ಜಾಗ ಕೊಟ್ಟಿದ್ದರು. ಈ ಜಾಗದ ಸರ್ವೆಗೆ ಅರ್ಜಿಯನ್ನು ಬಿ. ಜಯಶ್ರೀ ಸಲ್ಲಿಸಿದ್ದಾರೆ.ಅರ್ಜಿ ಶುಲ್ಕ ಕೂಡ ಮೂರುವರೆ ಸಾವಿರ ರೂಪಾಯಿ ಪಾವತಿ ಆಗಿದ್ದರೂ ಸರ್ವೇ ಆಗಿಲ್ಲ. ಕಾರಣ ಕೇಳಿದರೆ ಯಾರು ಕೂಡ ಸರಿಯಾಗಿ ಸ್ಪಂದನೆ ನೀಡಿಲ್ಲ ಎಂದು ಸರ್ವೆ ಅಧಿಕಾರಿ ವಿರುದ್ಧ ಬಿ ಜಯಶ್ರೀ ಗಂಭೀರವಾಗಿ ಆರೋಪ ಮಾಡಿದ್ದಾರೆ.








