ಹಾಸನ : ಹಾಸನದಲ್ಲಿ ಯಶ್ ತಾಯಿ ಪುಷ್ಪಾವತಿ ಸೈಟ್ ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನದ ವಿದ್ಯಾನಗರದಲ್ಲಿರುವ ಸೈಟ್ ಬಳಿ ವಾಗ್ವಾದ ನಡೆದಿದೆ. ದೇವರಾಜ್ ಮತ್ತು ನಟ ಯಶ್ ತಾಯಿ ಪುಷ್ಪ ಅವರ ನಡುವೆ ವಾಗ್ವಾದ ನಡೆದಿದ್ದು, ಆರು ವರ್ಷದ ಹಿಂದೆ ಸೈಟ್ ಖರೀದಿಸಿದ್ದಾಗಿ ಪುಷ್ಪ ಹೇಳಿದ್ದಾರೆ.
ಈ ವೇಳೆ ದೇವರಾಜ ಸೈಟ್ನ ಮೂಲ ಮಾಲೀಕರು ನಮ್ಮ ಕಡೆಯವರು ಎಂದು ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ದೇವರಾಜ್ ಹೇಳಿದರು. ಸೈಟ್ ಕ್ಲೀನ್ ಮಾಡಿಸಲು ಪುಷ್ಪ ಸ್ಥಳಕ್ಕೆ ಬಂದಿದ್ದಾರೆ, ಈ ವೇಳೆ ದೇವರಾಜ ಪುಷ್ಪ ಅವರ ನಡುವೆ ವಾಗ್ವಾದ ನಡೆದಿದೆ. ಆರು ವರ್ಷಗಳ ಹಿಂದೆ ನಾನು ದುಡ್ಡು ಕೊಟ್ಟು ಖರೀದಿಸಿದ್ದೇನೆ. ನಿಮ್ಮಪ್ಪಂದ ಎಲ್ಲಾ ನಂದು. ನಾನು ದುಡ್ಡು ಕೊಟ್ಟು ತಗೊಂಡಿದ್ದೇನೆ. ನಾನು ಎಲ್ಲಿ ಒತ್ತುವರಿ ಮಾಡಿಕೊಂಡಿದ್ದೇನೆ? ಎಂದರು.
ಇನ್ನು ಜಿಪಿಎ ಹೋಲ್ಡರ್ ದೇವರಾಜ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪುಷ್ಪ ಅವರು ನನಗೆ ನಿಂದನೆ ಮಾಡಿದ್ದಾರೆ ನಮಗೆ ಬೆದರಿಕೆ ಕೂಡ ಹಾಕುತ್ತಿದ್ದಾರೆ. ಕೋರ್ಟ್ ಆದೇಶದ ಬೋರ್ಡ್ ಅನ್ನು ಸಹ ಕಿತ್ತು ಹಾಕಿದ್ದಾರೆ. ಫೆಂಚ್ ಹಾಕಿದ್ದನ್ನು ಕಿತ್ತುಹಾಕಿ ಕೆಲಸ ಮಾಡುತ್ತಿದ್ದಾರೆ. ನನ್ ಜಾಗಕ್ಕೆ ನೀನ್ಯಾಕೋ ಬಂದಿದ್ದೀಯಾ? ಎಂದು ಬೆದರಿಕೆ ಹಾಕಿದ್ದಾರೆ ಎಂದರು.








