ಬೆಂಗಳೂರು : ತನ್ನ ಸಹ ಕಲಾವಿದೆಯ ಮೇಲೆ ಅತ್ಯಾಚಾರ ಎರಡು ಬಾರಿ ಗರ್ಭಪಾದ ಮಾಡಿಸಿರುವ ಆರೋಪ ಹೊತ್ತಿರುವ ಕಿರುತೆರೆ ನಟ ಮಡೆನೂರು ಮನುವನ್ನು ಇದೀಗ ಪೊಲೀಸರು ಸ್ಥಳ ಮಹಜರುಗಾಗಿ ಕರೆದುಕೊಂಡು ಹೋಗಿದ್ದಾರೆ. ಹೌದು ನಟ ಮಡೇನೂರು ಮನು ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಅನ್ನಪೂರ್ಣೇಶ್ವರಿ ನಗರ ಠಾಣೆ ಪೋಲಿಸರು ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಬೆಂಗಳೂರಿನ ಕಾಮಾಕ್ಯ ಬಳಿ ಇರುವ ಮನೆಗೆ ಕರೆದೋಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. 3 ವರ್ಷಗಳಿಗೂ ಹೆಚ್ಚು ಕಾಲ ಸಂತ್ರಸ್ತೇ ಬಾಡಿಗೆಗೆ ಇದ್ದಂತಹ ನಿವಾಸದಲ್ಲಿ ಇದೀಗ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮನು ಜೊತೆಗೆ ಮತ್ತಿಬ್ಬರನ್ನು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ. ನಾಗರಬಾವಿ ಬಳಿಯ ಸಂತ್ರಸ್ತೆ ಮನೆಯಲ್ಲಿ ಕೂಡ ಇದೀಗ ಮಹಜರು ನಡೆಸಲಾಗಿದೆ.