ಬೆಂಗಳೂರು : ಸಕಾಲ ಕಾಯ್ದೆಯಡಿ ಹೊಸ ಸೇವೆಗಳನ್ನು ಅಧಿಸೂಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಸಕಾಲ ನೋಡಲ್ ಅಧಿಕಾರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಕಾಲ ಮಿಷನ್ ಆಡಳಿತಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಆಡಳಿತ ಸುಧಾರಣಾ ಆಯೋಗ – 2ರ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ತಮ್ಮ ಇಲಾಖಾ ವ್ಯಾಪ್ತಿಯಲ್ಲಿನ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಅಡಿಯಲ್ಲಿ ಹೊಸ ಸೇವೆಗಳನ್ನು ಸಕಾಲ ಕಾಯ್ದೆಯಡಿ ಅಧಿಸೂಚಿಸಲು ಸಕಾಲ ಮಿಷನ್‌ಗೆ ಅವಶ್ಯಕ ಪ್ರಸ್ತಾವನೆ ಸಲ್ಲಿಸುವಂತೆ ಉಲ್ಲೇಖ(2)ರ ಈ ಕಛೇರಿಯ ಪತ್ರದಲ್ಲಿ ತಮ್ಮನ್ನು ಕೋರಲಾಗಿತ್ತು. ಆದರೆ, ಇದುವರೆವಿಗೆ ತಮ್ಮಿಂದ ಯಾವುದೇ ಪ್ರಸ್ತಾವನೆ ಸ್ವೀಕೃತಗೊಂಡಿರುವುದಿಲ್ಲ. ಇಲಾಖಾವಾರು ಸೇವಾ ವಿವರಗಳನ್ನು ಇದಕ್ಕೆ ಲಗತ್ತಿಸಿರುವ ಅನುಬಂಧದಲ್ಲಿ ಒದಗಿಸಲಾಗಿದೆ.
ಆದ್ದರಿಂದ, ಈ ವಿಷಯದ ಕಡೆ ಗಮನಹರಿಸಿ ಉಲ್ಲೇಖ (2)ರ ಪತ್ರದಲ್ಲಿ ಕೋರಿರುವಂತೆ ಅವಶ್ಯಕ ವಿಪ್ರಸ್ತಾವನೆಯನ್ನು ಶೀಪವಾಗಿ ಸಕಾಲ ಮಿಷನ್ ಗೆ ಸಲ್ಲಿಸುವಂತೆ ತಮ್ಮನ್ನು ಮತ್ತೊಮ್ಮೆ ಕೋರಲು ಈ ಮೂಲಕ ನಿರ್ದೇಶಿಸಲಾಗಿದೆ.