ಮಂಡ್ಯ : ದಸರಾ ಉದ್ಘಾಟನೆ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಲಿತ ಮಹಿಳೆಯರನ್ನು ಅಪಮಾನ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಕತ್ತೆಯ ಮೇಲೆ ಶಾಸಕ ಯತ್ನಾಳ್ ಪ್ರತಿಕೃತಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆದ ಪ್ರತಿಭಟನೆ ನಡೆಸಿದ್ದು, ದಲಿತ ಸಂಘಟನೆಗಳಿಂದ ನಡೆದ ಪ್ರತಿಭಟನೆ ಮಾಡಲಾಯಿತು. ಯತ್ನಾಳ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಶಾಸಕ ಯತ್ನಾಳ್ ರಾಜೀನಾಮೆಗೆ ದಲಿತಸಂಘಟನೆ ಆಗ್ರಹಿಸಲಾಯಿತು.
ಈ ವೇಳೆ ಯತ್ನಾಳ್ ಪ್ರತಿಕೃತಿಯನ್ನು ಪೊಲೀಸರು ಕಿತ್ತೊಯ್ದರು. ಆಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡೂವೆ ಮಾತಿನ ಚಕಮಕಿ ನಡೆಯಿತು. ಯತ್ನಾಳ್ ಪ್ರತಿಕೃತಿಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರ ಯತ್ನಿಸಿದ್ದಾರೆ. ಪ್ರತಿಭಟನಾಕಾರರ ತಡೆದು ಪೊಲೀಸರು ಪ್ರತಿಕೃತಿ ಕಿತ್ತೊಯ್ದರು. ದಲಿತರಿಗೆ ಅವಮಾನ ಮಾಡಿದ ಯತ್ನಾಳ್ ವಿರುದ್ದ SC,ST ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಯಿತು.
ಯತ್ನಾಳ್ ಒಬ್ಬ ಅಯೋಗ್ಯ ಒಬ್ಬ, ಹುಚ್ಚ, ಪೋರ್ಕಿ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು. mಮಹಿಳೆಯರು 2028ಕ್ಕೆ ಸೋಲಿಸಿ ಮನೆಗೆ ಕಳುಹಿಸುತ್ತಾರೆ. ರಾಜ್ಯಾದ್ಯಂತ ದಲಿತರು ಇವರ ಮೇಲೆ ಕೇಸ್ ಹಾಕ್ತಾವೆ. ಯತ್ನಾಳ್ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಿಮ್ಮನ್ನ ಮನೆಗ ಕಳುಹಿಸುವ ಕೆಲಸ ಮಾಡ್ತೇವೆ ಎಂದು ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ದಲಿತ ಸಂಘಟನೆ ಮುಖಂಡ ನರಸಿಂಹಮೂರ್ತಿ, ಡಿಎಸ್ಎಸ್ ಕೃಷ್ಣ, ಸೇರಿದಂತೆ ಹಲವರು ಭಾಗಿಯಾಗಿದ್ದರು.