ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಪ್ರೀತಿಯ ವಿಚಾರವಾಗಿ ಯುವತಿಯ ಚಿಕ್ಕಪ್ಪ ಯುವಕನಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ. ಚಾಕು ಇರಿತಕ್ಕೋಳಗಾದ ಯುವಕನನ್ನು ಗೌಸ್ ಮೂಹಿನಿದ್ದಿನ್ ಎಂದು ತಿಳಿದುಬಂದಿದೆ.
ಹುಬ್ಬಳ್ಳಿಯ ಸದರಸೋಪಾ ಓಣಿಯಲ್ಲಿ ನಿನ್ನೆ ರಾತ್ರಿ ಈ ಒಂದು ಘಟನೆ ನಡೆದಿದ್ದು, ಗೌಸ್ ಮೋಹಿದ್ದಿನ್ ಯುವತಿಯೊಬ್ಬಳನ್ನು ಪ್ರೀತಿಸಿತ್ತಿದ್ದ. ನಿನ್ನೆ ಕರೆ ಮಾಡಿ ಯುವಕನನ್ನು ಯುವತಿ ಕರೆಸಿಕೊಂಡಿದ್ದಾಳೆ. ಜ್ ವೇಳೆ ಚಿಕ್ಕಪ್ಪ ವಸೀಂ ಎಂಬತಾನಿಂದ ಚಾಕು ಇರಿಯಲಾಗಿದೆ.
ತಮ್ಮ ಮನೆಯ ಯುವತಿಯನ್ನು ಪ್ರೀತಿಸಿದಕ್ಕೆ ಯುವತಿ ಚಿಕ್ಕಪ್ಪ ವಸೀಂ ಯುವಕನಿಗೆ ಚಾಕು ಇರಿದಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.