ಬೆಂಗಳೂರು : ಮದುವೆ ಹೆಸರಿನಲ್ಲಿ ಕ್ರಿಪ್ಟೋದಲ್ಲಿ ಹಣ ಹೂಡಿಕೆ ಮಾಡಿಸಿ ವಂಚನೆ ಎಸಗಲಾಗಿದೆ. ಯುವತಿಯೊಬ್ಬಳು ಯುವಕನಿಗೆ ಮದುವೆ ಹೆಸರಲ್ಲಿ 21.22 ಲಕ್ಷ ವಂಚಿಸಿದ್ದಾಳೆ. ಬೆಂಗಳೂರಿನ ಟಿ ದಾಸರಹಳ್ಳಿ ಮೂಲದ ಯುವಕನಿಗೆ ಯುವತಿ ವಂಚನೆ ಎಸಗಿದ್ದಾಳೆ.
ಮ್ಯಾಟ್ರಿಮೋನಿಯಲ್ಲಿ ವಧು ಹುಡುಕುತ್ತಿದ್ದ ಸಿ.ಎಸ್ ರಾಕೇಶ್ ಎಂಬ ಯುವಕನಿಗೆ ಶಿರಿಷ ಎಂಬಾಕೆ ಪರಿಚಯವಾಗಿದ್ದಳು. ಇಬ್ಬರು ಪರಸ್ಪರ ಸ್ನೇಹಿತರಾಗಿ ಫೋನ್ ಕಾಂಟಾಕ್ಟ್ ನಲ್ಲಿದ್ದರು. ನಂತರ ಮದುವೆಯಾಗೋಣ ಎಂದು ಯುವಕನಿಗೆ ಶಿರೀಶ ಆಮಿಷ ಒಡ್ಡಿದ್ದಾಳೆ. ಕ್ರಿಪ್ಟೋದಲ್ಲಿ ಟ್ರೇಡಿಂಗ್ ಮಾಡಲು ಹೇಳಿದ್ದಳು. ವೆಬ್ಸೈಟ್ ಲಿಂಕ್ ಹಾಗೂ ಬ್ಯಾಂಕ್ ಖಾತೆ ನೀಡಿ ಹಣ ಹೂಡಿಕೆ ಮಾಡಲು ಹೇಳಿದ್ದಾಳೆ.
ಕೆಲ ದಿನಗಳ ಕಾಲ ಲಾಭದ ಅಂಶ ತೋರಿಸಿದ್ದ ಶಿರೀಶ ನಂತರ ಹಣ ಡ್ರಾ ಮಾಡಲು ಕಮಿಷನ್ ಕಟ್ಟಬೇಕು ಎಂದು ಸೂಚನೆ ನೀಡಿದ್ದಾಳೆ. ಹಂತ ಹಂತವಾಗಿ 21. 22 ಲಕ್ಷ ರೂಪಾಯಿ ಹಾಕಿಸಿಕೊಂಡು ವಂಚನೆ ಎಸಗಿದ್ದಾಳೆ. ಬಳಿಕ ಹೂಡಿಕೆ ಮಾಡಿದ ಹಣ ನೀಡದೆ ಲಾಭವು ನೀಡದೆ ವಂಚನೆ ಎಸಗಿದ್ದಾಳೆ. ಮೋಸ ಹೋದ ವಿಚಾರ ತಿಳಿದು ಇದೀಗ ಯುವಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಉತ್ತರ ವಿಭಾಗದ ಸೆನ್ ಠಾಣೆಗೆ ಸಿಎಸ್ ರಾಕೇಶ್ ದೂರು ನೀಡಿದ್ದಾನೆ. ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








