ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಮಹಿಳೆ ಉದ್ಧಟತನ ತೋರಿದ್ದಾರೆ. ಶಕ್ತಿ ಯೋಜನೆಯ ಟಿಕೆಟ್ ಬಿಸಾಕಿ ಮಹಿಳೆ ದರ್ಪ ಮೆರೆದಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಟು ದಾಬಸ್ ಪೇಟೆ ಬಸ್ ನಲ್ಲಿ ಈ ಒಂದು ಘಟನೆ ನಡೆದಿದೆ.
ಹಣಕೊಟ್ಟು ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ಹೇಳಿದ್ದಾರೆ. ಆದರೂ ಸಹ ಟಿಕೆಟ್ ಪಡೆಯದೆ ಮಹಿಳೆ ಉದ್ಧಟತನ ತೋರಿದ್ದಾರೆ. ಚೆಕಿಂಗ್ ನವರು ಬರುತ್ತಾರೆ ಅಂತ ಹೇಳಿದರೆ, ಯಾರಾದರೂ ಬರಲಿ ನಾನು ಮಾತನಾಡುತ್ತೇನೆ ಅಂತ ಉದ್ಧಟತನ ತೋರಿದ್ದಾರೆ. ಇನ್ನೋರ್ವ ಮಹಿಳೆ ಮೇಡಂ ಟಿಕೆಟ್ ತೊಗೊಳ್ಳಿ ನಿಮ್ ಜೊತೆ ನಮಗೂ ಲೇಟ್ ಆಗುತ್ತೆ ಎಂದಿದ್ದಾರೆ. ಏನ್ ಮಾಡ್ತೀರಾ ಮಾಡಿ ಬೇಕಾದ್ ಮಾಡಿ ಅಂತ ಅವಾಜ್ ಹಾಕಿದ್ದಾರೆ.








