ಬೆಂಗಳೂರು : ಬೆಂಗಳೂರಲ್ಲಿ ಭಾರಿ ಅನಾಹುತವೊಂದು ತಪ್ಪಿದ್ದು, ಶಾಲಾ ಬಸ್ ಒಂದು ನಿಯಂತ್ರಣ ಕಳೆದುಕೊಂಡು ರಸ್ತೆ ಗುಂಡಿಗೆ ಜಾರಿದ ಘಟನೆ ನಡೆದಿದೆ. ಶಾಲಾ ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ಶಾಲಾ ಮಕ್ಕಳು ಇದೀಗ ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಪಣತ್ತೂರು ಬಳಗರೆ ಬಳಿ ಈ ಒಂದು ಘಟನೆ ಸಂಭವಿಸಿದೆ.
ಮಳೆ ನೀರಿನಿಂದ ಚಾಲಕನಿಗೆ ರಸ್ತೆ ಪಕ್ಕದ ಗುಂಡಿ ಕಾಣಿಸಲಿಲ್ಲ. ಏಕಾಏಕಿ ಬಸ್ ಗುಂಡಿಗೆ ವಾಲಿದೆ. ಪಕ್ಕದಲ್ಲಿ ಇನ್ನೊಂದು ಶಾಲಾ ಬಸ್ ಹೋಗುತ್ತಿತ್ತು ಅದನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಲು ಹೋದಾಗ ಚಾಲಕನಿಗೆ ಮಳೆ ಬಂದು ನೀರು ತುಂಬಿದ ತಕ್ಷಣ ರಸ್ತೆ ಪಕ್ಕದಲ್ಲಿರುವ ಗುಂಡಿ ಕಾಣಿಸಲಿಲ್ಲ. ತಕ್ಷಣ ಬಸ್ ಗುಂಡಿಗೆ ಜಾರಿದೆ.ಕೂಡಲೇ ಶಾಲಾ ಸಿಬ್ಬಂದಿಗಳು ಮಕ್ಕಳನ್ನು ಬಸ್ ನಿಂದ ಹೊರಗಡೆ ತಂದಿದ್ದು ಭಾರಿ ಅನಾಹುತ ಒಂದು ತಪ್ಪಿದೆ.