Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

`EPFO’ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ಪಿಂಚಣಿಯಲ್ಲಿ ಭಾರೀ ಏರಿಕೆ | EPFO Pension Hike

14/07/2025 7:38 AM

ಕ್ಲಬ್ ವಿಶ್ವಕಪ್ ಫೈನಲ್ : ಪ್ಯಾರಿಸ್ ಸೇಂಟ್ ಜರ್ಮೈನ್ ವಿರುದ್ಧ ಚೆಲ್ಸಿಯಾಗೆ ಭರ್ಜರಿ ಗೆಲುವು | Club world cup

14/07/2025 7:27 AM

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ `LKG, UKG’ ತರಗತಿ ಆರಂಭ

14/07/2025 7:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `SSLC-PUC’ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ವೃದ್ಧಿಗೆ ಮಹತ್ವದ ಕ್ರಮ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
KARNATAKA

BIG NEWS : ರಾಜ್ಯದಲ್ಲಿ `SSLC-PUC’ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ವೃದ್ಧಿಗೆ ಮಹತ್ವದ ಕ್ರಮ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

By kannadanewsnow5731/08/2024 5:01 AM
vidhana soudha
vidhana soudha

ಬೆಂಗಳೂರು : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ವೃದ್ಧಿಗಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳ ಶೈಕ್ಷಣಿಕ ಫಲಿತಾಂಶ ವೃದ್ಧಿಗಾಗಿ ಉಲ್ಲೇಖಿತ ಸಭೆಗಳಲ್ಲಿ ಈಗಾಗಲೇ ಮಾಹಿತಿ | ಸೂಚನೆಗಳನ್ನು ನೀಡಲಾಗಿದ್ದು, ಜಿಲ್ಲೆಯಲ್ಲಿನ ವಿವಿಧ ಹಂತದ ಅಧಿಕಾರಿಗಳು ಈ ಮುಂದಿನಂತೆ ಕಾರ್ಯನಿರ್ವಹಿಸುವುದು ;

1. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಪಠ್ಯವಸ್ತುವನ್ನು ಶೈಕ್ಷಣಿಕ ಮಾರ್ಗದರ್ಶಿಯಂತೆ ಡಿಸೆಂಬರ್ 2024 ರ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮವಹಿಸುವುದು.

2. ಪ್ರತಿದಿನ ಶಾಲೆ / ಕಾಲೇಜು ಅವಧಿಯ ಮೊದಲು ಅಥವಾ ನಂತರ ಒಂದು ವಿಷಯಕ್ಕೆ ವಿಶೇಷ ತರಗತಿಯನ್ನು ಆಯೋಜಿಸುವುದು.

3. ಘಟಕ ಪರೀಕ್ಷೆಗಳನ್ನು ನಡೆಸಿ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಪ್ರಗತಿಯನ್ನು ವಿಶ್ಲೇಷಿಸುವುದು ಹಾಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಲಭ್ಯವಿರುವ ಶಾಲೆ/ಕಾಲೇಜುಗಳಲ್ಲಿ ಎಲ್ಲಾ ಘಟಕ ಪರೀಕ್ಷೆಗಳನ್ನು ವೆಬ್ ಕಾಸ್ಟಿಂಗ್ ವೀಕ್ಷಣೆಯಲ್ಲಿ ನಡೆಸುವುದು.

4. ನಿಧಾನಗತಿ ಕಲಿಕಾ ಲಕ್ಷಣಗಳಿರುವ ವಿದ್ಯಾರ್ಥಿಗಳ ಕಲಿಕೆಯನ್ನು ಬಲವರ್ಧನೆಗೊಳಿಸಲು ಅವರನ್ನು ಕಲಿಕಾ ಪುಗತಿ ಸಾಧಿಸಿರುವ ವಿದ್ಯಾರ್ಥಿಗಳೊಂದಿಗೆ ಸಂಯೋಜಿಸುವುದು (Buddy Pairing).

5. ಪ್ರತಿ ಘಟಕವಾರು ಕಲಿಕಾ ಬಲವರ್ಧನೆ ಅಭ್ಯಾಸ ಪುಸ್ತಕಗಳು / ಪ್ರಶ್ನೆಕೋಠಿ (Question Bank) ಗಳನ್ನು ಅಭಿವೃದ್ಧಿಪಡಿಸುವುದು.

6. ವಿದ್ಯಾರ್ಥಿಗಳ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರತಿದಿನ 2 ಪುಟಗಳನ್ನು

ಬರೆಸುವುದು ಮತ್ತು ಗಟ್ಟಿಯಾಗಿ ಓದಿಸುವ ಅಭ್ಯಾಸವನ್ನು ಮಾಡಿಸುವುದು.

7. ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆಯನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ವರದಿಯನ್ನು ಪೋಷಕರಿಗೆ ತಿಳಿಸುವುದು.

8. ಯಾವುದೇ ವಿದ್ಯಾರ್ಥಿಯು 3 ರಿಂದ 4 ದಿನಗಳು ನಿರಂತರ ಗೈರುಹಾಜರಾದರೆ ಎಸ್.ಡಿ.ಎಂ.ಸಿ ಹಾಗೂ ಇನ್ನಿತರೆ ಭಾಗೀದಾರರೊಂದಿಗೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಶಾಲೆಗೆ ಕರೆತರಲು ಮನವೊಲಿಸುವುದು ಮತ್ತು ನಿರಂತರ ಗೈರುಹಾಜರಾಗುವ ವಿದ್ಯಾರ್ಥಿಗಳ ಕುರಿತು Case Study ನಡೆಸಿ ಸೂಕ್ತ ಕಾರಣಗಳನ್ನು ಹುಡುಕಿ ಗೈರುಹಾಜರಿ ಕಡಿಮೆ ಮಾಡಲು ಕ್ರಮವಹಿಸುವುದು.

9. ಪ್ರತಿದಿನ ಮುಂಜಾನೆ ಅಥವಾ ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಅಭ್ಯಾಸ ಮಾಡುತ್ತಿರುವುದನ್ನು ಪರಿಶೀಲಿಸಲು Wake up call ಮಾಡುವುದು.

10.ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಫಲಿತಾಂಶ ಉತ್ತಮಪಡಿಸಲು ಪುನಶ್ವೇತನ ತರಬೇತಿಯನ್ನು ಆಯೋಜಿಸುವುದು.

11.ಫಲಿತಾಂಶದ ಅಭಿವೃದ್ಧಿಗಾಗಿ ಕೈಗೊಳ್ಳುವ ಎಲ್ಲಾ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ನಡೆಸುವುದು ಜಿಲ್ಲಾ ಹಾಗೂ ತಾಲ್ಲೂಕು ಹಂತದ ಎಲ್ಲಾ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಉಪನಿರ್ದೇಶಕರು ಆಡಳಿತ, ಅಭಿವೃದ್ಧಿ ಮತ್ತು ಪದವಿ ಪೂರ್ವ ಶಿಕ್ಷಣರವರು ಈ ಕಾರ್ಯವನ್ನು ನಿರ್ವಹಿಸುವುದು.

12. Average, Below Average , Above Average F ರಚಿಸಿ ಪ್ರತೀ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡುವುದು.

13.ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗೆ ಪ್ರತಿ ವಿಷಯದಲ್ಲಿ 5 ಮಾದರಿ ಪ್ರಶ್ನೆಪತ್ರಿಕೆಗಳನ್ನು ರಚಿಸಿ ಮಂಡಲಿಯ ವೆಬ್‌ಸೈಟ್‌ನಲ್ಲಿ Upload ಮಾಡಲಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಬಳಸಿಕೊಳ್ಳುವುದು.

14. ಪಿ.ಯು.ಸಿ ಫಲಿತಾಂಶ ಸುಧಾರಣೆಗಾಗಿ ಕೈಗೊಂಡ ಅಂಶಗಳನ್ನು ಪರಿಶೀಲಿಸಿ ಮೇಲುಸ್ತುವಾರಿ ನಡೆಸಲು ಪ್ರಾಂಶುಪಾಲರು ಮತ್ತು ಇಬ್ಬರು ಉಪನ್ಯಾಸಕರನ್ನೊಳಗೊಂಡ 01 ತಂಡವನ್ನು (ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳ ಉಪನ್ಯಾಸಕರು) ಜಿಲ್ಲಾ ಉಪನಿರ್ದೇಶಕರು ಪದವಿ ಪೂರ್ವ ರವರು ರಚಿಸುವುದು.

15.10ನೇ ತರಗತಿಯ ಪ್ರತಿ ಘಟಕವಾರು ಪ್ರಶ್ನೆಕೋಠಿಗಳನ್ನು ವಿವಿಧ ಡಯಟ್‌ ಮುಖಾಂತರ ಸಿದ್ಧಪಡಿಸಿ, ಮಂಡಲಿಯ ವೆಬ್‌ಸೈಟ್‌ನಲ್ಲಿ ಲಭ್ಯ ಮಾಡಲಾಗುತ್ತಿದ್ದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು ಕ್ರಮವಹಿಸುವುದು.

16.ಎಸ್.ಎಸ್.ಎಲ್.ಸಿ ಮಧ್ಯವಾರ್ಷಿಕ ಪರೀಕ್ಷೆ (SA-1) ಮತ್ತು ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳನ್ನು ಕೆ.ಎಸ್.ಇ.ಎ.ಬಿ ವತಿಯಿಂದ ಶಾಲಾ ಲಾಗಿನಲ್ಲಿ ಲಭ್ಯ ಮಾಡಲಾಗುವುದು.

17.ಸರ್ಕಾರದ ಆದೇಶ ಸಂಖ್ಯೆ:ಇಪಿ 90 ಎಸ್ಎಲ್‌ಬಿ 2024, ದಿನಾಂಕ:24.07.2024 ರಂತೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುದಾಖಲಾಗಲು ಅವಕಾಶ ನೀಡಲಾಗಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುವಂತೆ ಕ್ರಮವಹಿಸುವುದು. ಈ ಕುರಿತಾಗಿ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವುದು.

18. ತಿಂಗಳಿಗೊಮ್ಮೆ ಜಿಲ್ಲಾ ಉಪನಿರ್ದೇಶಕರು ಆಡಳಿತ, ಅಭಿವೃದ್ಧಿ ಮತ್ತು ಪದವಿ ಪೂರ್ವ, ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ನಡೆಸಿ ಜಿಲ್ಲಾಧಿಕಾರಿಗಳು / ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸುವುದು. ಪ್ರತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಹಿಂದಿನ ಸಭೆಯಲ್ಲಿ ನಿರ್ಣಯಿಸಲಾದ ಅಂಶಗಳ ಆಧಾರದ ಮೇಲೆ ಕೈಗೊಂಡ ಅನುಪಾಲನಾ ಕ್ರಮಗಳನ್ನು ಕಡ್ಡಾಯವಾಗಿ ಪರಿಶೀಲಿಸುವುದು.

19.2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶದ ವಿಶ್ಲೇಷಣೆ ಆಧಾರದ ಮೇಲೆ ಫಲಿತಾಂಶ ಕುಸಿತ ದಾಖಲಿಸಿರುವ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಫಲಿತಾಂಶ ಸುಧಾರಣೆಗಾಗಿ ದೀರ್ಘಾವಧಿ, ಮಧ್ಯಮಾವಧಿ ಮತ್ತು ಅಲ್ಪಾವಧಿ ಕ್ರಿಯಾ ಯೋಜನೆಗಳನ್ನು ರೂಪಿಸುವುದು.

20.ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಹಂತದ ವಿವಿಧ ಸ್ತರದ ಅಧಿಕಾರಿಗಳಿಗೆ ಶಾಲೆಗಳನ್ನು ದತ್ತು ನೀಡುವುದು. ಈ ಮೇಲ್ಕಂಡ 20 ಅಂಶಗಳ ಕಾರ್ಯಕ್ರಮಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಅನುಷ್ಠಾನಗೊಳಿಸಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ವೃದ್ಧಿಗಾಗಿ ಎಲ್ಲಾ ಹಂತದ ಅಧಿಕಾರಿಗಳು ಕ್ರಮವಹಿಸುವುದು.

 

BIG NEWS : ರಾಜ್ಯದಲ್ಲಿ `SSLC-PUC' ವಾರ್ಷಿಕ ಪರೀಕ್ಷೆಗಳ ಫಲಿತಾಂಶ ವೃದ್ಧಿಗೆ ಮಹತ್ವದ ಕ್ರಮ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ BIG NEWS: A MAJOR STEP TO IMPROVE THE RESULTS OF SSLC-PUC ANNUAL EXAMINATIONS IN THE STATE: STATE GOVERNMENT
Share. Facebook Twitter LinkedIn WhatsApp Email

Related Posts

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ `LKG, UKG’ ತರಗತಿ ಆರಂಭ

14/07/2025 7:25 AM1 Min Read

BREAKING : ಹೃದಯಾಘಾತದಿಂದ ಜೆಡಿಎಸ್ ಮುಖಂಡ `ಹೆಚ್.ಟಿ ರಾಜೇಂದ್ರ’ ನಿಧನ | H.T. Rajendra passes away

14/07/2025 7:12 AM1 Min Read

ವರ್ಷಾಂತ್ಯದೊಳಗೆ 42 ಸ್ವಯಂಚಾಲಿತ ಪರೀಕ್ಷಾ ಟ್ರ್ಯಾಕ್ ನಿರ್ಮಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

14/07/2025 7:06 AM1 Min Read
Recent News

`EPFO’ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ಪಿಂಚಣಿಯಲ್ಲಿ ಭಾರೀ ಏರಿಕೆ | EPFO Pension Hike

14/07/2025 7:38 AM

ಕ್ಲಬ್ ವಿಶ್ವಕಪ್ ಫೈನಲ್ : ಪ್ಯಾರಿಸ್ ಸೇಂಟ್ ಜರ್ಮೈನ್ ವಿರುದ್ಧ ಚೆಲ್ಸಿಯಾಗೆ ಭರ್ಜರಿ ಗೆಲುವು | Club world cup

14/07/2025 7:27 AM

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ `LKG, UKG’ ತರಗತಿ ಆರಂಭ

14/07/2025 7:25 AM

Big News: ಲಂಡನ್ನ ಸೌತ್ ಎಂಡ್ ವಿಮಾನ ನಿಲ್ದಾಣದಲ್ಲಿ ಬಿಸಿನೆಸ್ ಜೆಟ್ ಪತನ | Business Jet Crashes

14/07/2025 7:18 AM
State News
KARNATAKA

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 4000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ `LKG, UKG’ ತರಗತಿ ಆರಂಭ

By kannadanewsnow5714/07/2025 7:25 AM KARNATAKA 1 Min Read

ಬೆಂಗಳೂರು: ಪೋಷಕರಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯಾದ್ಯಂತ 4 ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಲ್ಲಿ ಅಕ್ಟೋಬರ್ ವೇಳೆಗೆ ಎಲ್ಕೆಜಿ, ಯುಕೆಜಿ…

BREAKING : ಹೃದಯಾಘಾತದಿಂದ ಜೆಡಿಎಸ್ ಮುಖಂಡ `ಹೆಚ್.ಟಿ ರಾಜೇಂದ್ರ’ ನಿಧನ | H.T. Rajendra passes away

14/07/2025 7:12 AM

ವರ್ಷಾಂತ್ಯದೊಳಗೆ 42 ಸ್ವಯಂಚಾಲಿತ ಪರೀಕ್ಷಾ ಟ್ರ್ಯಾಕ್ ನಿರ್ಮಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

14/07/2025 7:06 AM

SHOCKING : ಹೊಸಪೇಟೆಯಲ್ಲಿ ಕೋತಿ ದಾಳಿಗೆ ಮೂರೂವರೆ ವರ್ಷದ ಬಾಲಕಿ ಬಲಿ.!

14/07/2025 6:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.