ಮಡಿಕೇರಿ : ಮಡಿಕೇರಿಯಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಶವ ಸಾಗಾಟಕ್ಕೂ ಜನರು ಪರದಾಟ ನಡೆಸುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದೆ ಶವ ಸಾಗಾಟಕ್ಕೆ ಜನ ಪರದಾಟ ನಡೆಸಿದ್ದು, ಜಡಿ ಮಳೆಯಲ್ಲಿ ಜನರು ಶವ ಹೊತ್ತು ಸಾಗಿಸಿದ್ದ ಘಟನೆ ನಡೆದಿದೆ.
ಮಡಿಕೇರಿ ನಗರದ ಕನ್ನಂಡ ಬಾಣೆ ಎಂಬಲ್ಲಿ ಈ ಒಂದು ಘಟನೆ ನಡೆದಿದೆ. ಮಡಿಕೇರಿಯಲ್ಲಿ ಶವ ಸಾಗಟಕ್ಕೂ ಜನ ಪರದಾಟ ನಡೆಸುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದೆ ಶವ ಸಾಗಾಟಕ್ಕೆ ಜನರು ಪರದಾಟ ನಡೆಸುತ್ತಿದ್ದು, ಜನರು ಶವ ಹೊತ್ತು ಸಾಗಿಸಿದ ಘಟನೆ ನಡೆದಿದೆ. ಮಡಿಕೇರಿ ನಗರದ ಕನ್ನಡ ಬಾಣೆಯಲ್ಲಿ ಈ ಒಂದು ಘಟನೆ ನಡೆದಿದೆ.
ಕನ್ನಂಡ ಬಾಣೆ ನಿವಾಸಿಗಳಿಗೆ ನರಕದ ಬದುಕು ಎದುರಾಗಿದ್ದು, ಗರ್ಭಿಣಿಯರನ್ನು ಕೂಡ ಕುರ್ಚಿಯಲ್ಲಿ ಕೂರಿಸಿ ಸಾಗಾಟ ನಡೆಸಲಾಗಿದೆ. ಕನ್ನಂಡ ಬಾಣೆಗೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅಡ್ಡಿಪಡಿಸಲಾಗಿದ್ದು, ಬಡಾವಣೆಯ ಅಂಚಿನಲ್ಲಿ ಮೀಸಲು ಅರಣ್ಯ ಪ್ರದೇಶ ಇದೆ ಹಾಗಾಗಿ ಅರಣ್ಯ ಬದಿಯಲ್ಲಿ ರಚನೆ ನಿರ್ಮಿಸಿದಂತೆ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.