ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಪರಿಚಿತ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸಹ ಅಸ್ತಿಪಂಜರಗಳಿಗಾಗಿ ಉತ್ಖನನ ಕಾರ್ಯ ನಡೆಯಿತು. ದೂರುದಾರ ತೋರಿಸಿದ 9ನೇ ಪಾಯಿಂಟ್ ನಲ್ಲಿ ಎಸ್ಐಟಿ ಅಧಿಕಾರಿಗಳು ಉತ್ಖನನ ನಡೆಸಿದರು. ಆದರೆ ಯಾವುದೇ ವಸ್ತುಗಳು ದೊರೆತಿಲ್ಲ ಎಂದು ತಿಳಿದು ಬಂದಿದೆ.
ಹೌದು 9ನೇ ಪಾಯಿಂಟ್ ನಲ್ಲಿ ಉತ್ಖನನ ಕಾರ್ಯ ಈಗ ಮುಂದುವರೆದಿದ್ದು ಈ ಒಂದು ಪಾಯಿಂಟ್ ನಲ್ಲಿ ಎರಡು ಅಡಿ ಅಗೆದರು ಕೂಡ ಯಾವುದೇ ಕುರುಹುಗಳಾಗಲಿ, ಮನುಷ್ಯನ ಅಸ್ತಿ ಪಂಜರದ ಭಾಗಗಳಾಗಲಿ ಸಿಕ್ಕಿಲ್ಲ. ಈಗಾಗಲೇ ಅಧಿಕಾರಿಗಳು ದೂರುದಾರನ ಮಾಹಿತಿಯನ್ನು ಆಧರಿಸಿ ಉತ್ಖನ ಕಾರ್ಯ ಆರಂಭಿಸಿದೆ.