ಬೆಂಗಳೂರು : ಕಳೆದ ಹಲವಾರು ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿದ್ದು ಇಡೀ ರಾಜ್ಯವನ್ನೇ ಬೆಚ್ಚಿ ಬೆಳಿಸಿವೆ. ಇದೀಗ ಬೆಂಗಳೂರಿನಲ್ಲಿ ಕಾರಿನಲ್ಲಿದ್ದಂತಹ ಬ್ಯಾಗನ್ನು ಕ್ಷಣಾರದದಲ್ಲಿ ಗಾಜು ಒಡೆದು ಕಳ್ಳರು ಬ್ಯಾಕ್ ಕದ್ದೊಯ್ದಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.
ಹೌದು ಕಾರಿನ ಗಾಜು ಒಡೆದು ಕ್ಷಣಮಾತ್ರದಲ್ಲಿ ಬ್ಯಾಗ್ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಿನ್ನೆ ಸಂಜೆ ಈ ಒಂದು ಕಳ್ಳತನ ನಡೆದಿದೆ. ಹೊಂಚು ಹಾಕಿ ಕಾರಿನಲ್ಲಿದ್ದಂತಹ ಬ್ಯಾಗನ್ನು ಖದೀಮರು ಕಳ್ಳತನ ನಡೆಸಿದ್ದಾರೆ.ಬ್ಯಾಗ್ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.