ತುಮಕೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ವಿಧಾನಸೌಧದಲ್ಲಿ ಜಾತಿ ಗಣತಿ ವರದಿಯನ್ನು ಮಂಡಿಸಲಾಯಿತು. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾದಿಗಣತಿ ವರದಿ ಮಂಡನೆ ಆಯಿತು. ಬಳಿಕ ಎಪ್ರಿಲ್ 17ರಂದು ವಿಶೇಷ ಸಂಪುಟ ಸಭೆ ಕರೆದಿದ್ದು ಆ ಒಂದು ಸಭೆಯಲ್ಲಿ ಜಾತಿಗಣತಿ ವರದಿ ಜಾರಿ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ಇನ್ನು ಜಾತಿಗಣತಿ ವರದಿ ವಿಚಾರವಾಗಿ ತುಮಕೂರು ಜಿಲ್ಲೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಏಪ್ರಿಲ್ 17ರಂದು ಸಚಿವ ಸಂಪುಟದಲ್ಲಿ ಜಾತಿಗಣತಿ ವರದಿ ಚರ್ಚೆ ಬಳಿಕ ವರದಿಯನ್ನು ಸರ್ಕಾರ ಒಪ್ಪಬಹುದು ಅಥವಾ ತಿರಸ್ಕರಿಸಬಹುದು.ಜಾತಿ ಗಣತಿ ವರದಿ ಶೇಕಡ 95 ರಷ್ಟು ಸರಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಜಾತಿಗಣತಿಯ ವರದಿಯನ್ನು ಒಪ್ಪುವ ಸಾಧ್ಯತೆ ಹೆಚ್ಚಿದೆ ಎಂದರು.
ನಾನು ವರದಿಯನ್ನು ಓದುತ್ತಿದ್ದೇನೆ ಇನ್ನು ಪೂರ್ತಿಯಾಗಿ ಓದಿಲ್ಲ. 2015ರಿಂದ ಜಾತಿ ಗೆಳತಿ ಸಮೀಕ್ಷೆ ಮಾಡಲಾಗಿದೆ. ವರದಿಯನ್ನು ಒಪ್ಪಲಿ ಅಥವಾ ಬಿಡಲಿ ಅದು ಬೇರೆ ವಿಚಾರ. ಸರ್ಕಾರಕ್ಕೆ ವರದಿ ನೀಡುವ ಪ್ರಕ್ರಿಯೆಯಾದರೂ ಆಗಬೇಕಲ್ವಾ? ಜಾತಿಗಣತಿ ವರದಿಗಾಗಿ ಸರ್ಕಾರ 168 ಕೋಟಿ ರೂಪಾಯಿ ಖರ್ಚು ಮಾಡಿದೆ. ಬಿಜೆಪಿಯವರು ಅದನ್ನು ಸರಿ ಇಲ್ಲ ಅಂತ ಬೇಕಾದರೂ ಹೇಳಲಿ ಸರ್ಕಾರ ಒಪ್ಪಿದ ಬಳಿಕ ವರದಿ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.