ಶಿವಮೊಗ್ಗ : ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಬೆಂಗಳೂರಿನ ಇಬ್ಬರು ಬಿಜೆಪಿ ಶಾಸಕರು ಸೇರಿದಂತೆ ಒಟ್ಟು 8 ಜನ ಬಿಜೆಪಿ ಶಾಸಕರು ಶೀಘ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದರು.
ಈ ಒಂದು ವಿಚಾರವಾಗಿ ಶಿವಮೊಗ್ಗದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರು, ಪ್ರತಿಕ್ರಿಯೆ ನೀಡಿ, ಸಿಪಿ ಯೋಗೇಶ್ವರ್ ಬೆನ್ನಲ್ಲೇ ಇನ್ನು 8ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಲಿರುವ ವದಂತಿಯನ್ನು ಕೇಳಿದಾಗ ಪ್ರತಿಕ್ರಿಯಿಸಿದ ಪರಮೇಶ್ವರ್, ತನಗಂತೂ ಅದರ ಬಗ್ಗೆ ಮಾಹಿತಿ ಇಲ್ಲ, ಎಸ್ ಟಿ ಸೋಮಶೇಖರ್ ವಿಷಯದ ಬಗ್ಗೆ ಮಾತಾಡಿರುವುದರಿಂದ ಅವರಿಂದಲೇ ಹೆಚ್ಚಿನ ವಿವರಣೆ ಸಿಗಬಹುದು ಎಂದರು.
ಇನ್ನು HDK ಕುರಿತಾಗಿ ಮಾತನಾಡಿದ ಅವರು, ಕೇಂದ್ರ ಭಾರೀ ಕೈಗಾರಿಕೆ ಮತ್ತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಮುಚ್ಚಿರುವ ಹೆಚ್ಎಂಟಿ ಕಾರ್ಖಾನೆಯನ್ನು ಪುನರಾರಂಭಿಸುವ ಬಗ್ಗೆ ಮಾತಾಡುತ್ತಾರೆ. ಈ ವೇಳೆ ಗೃಹಸಚಿವ ಜಿ ಪರಮೇಶ್ವರ್, ಹೆಚ್ಎಂಟಿ ಕಾರ್ಖಾನೆ ಮುಚ್ಚಿಹೋಗಿರುವುದರಿಂದ ಅದಕ್ಕೆ ನೀಡಿದ ಜಮೀನನ್ನು ವಾಪಸ್ಸು ಪಡೆಯಲು ರಾಜ್ಯ ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಹೇಳಿದರು.