ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಅತ್ಯಂತ ಜೋರಾಗಿತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ, ಬೆಂಗಳೂರ್ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿದ್ದು, ಕಳೆದ ತಿಂಗಳು ನಗರದಲ್ಲಿ 8 ಮಂದಿ ವಿದೇಶಿ ಪ್ರಜೆಗಳು ಸೇರಿದಂತೆ 57 ಮಂದಿ ಪೆಡ್ಲರ್ಗಳನ್ನು ಬಂಧಿಸಿ 85 ಕೇಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿ ಜನವರಿ ತಿಂಗಳಿನಲ್ಲಿ 36 ಎನ್ಡಿಪಿಸ್ (ಡ್ರಗ್ಸ್) ಪ್ರಕರಣ ದಾಖಲಾಗಿವೆ. ಇದರಲ್ಲಿ 8 ವಿದೇಶಿ ಪ್ರಜೆಗಳು ಸೇರಿ 57 ಆರೋಪಿಗಳನ್ನು ಬಂಧಿಸಿ ವಿವಿಧ ಮಾದರಿಯ 85 ಕೆ.ಜಿ ಡ್ರಗ್ಸ್ ಜಪ್ತಿಯಾಗಿದೆ ಎಂದರು. ನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಿ ಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮದಡಿ 164 ಪ್ರಕರಣ ದಾಖಲಿಸಲಾಗಿದೆ.
ಇದರಲ್ಲಿ ಮುಚ್ಚಳಿಕೆ ಉಲ್ಲಂಘನೆ ಮಾಡಿದ ಮೂವರ ವಿರುದ್ದ ಬಾಂಡ್ ಮೌಲ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಿಚಾರಣೆಗೆ ಗೈರು ಹಿನ್ನೆಲೆಯಲ್ಲಿ ನ್ಯಾಯಾ ಲಯದ ವಾರೆಂಟ್ ಜಾರಿಗೊಂಡಿದ್ದಪೋಟ್ರೊ ಸೇರಿ ಇತರೆ ಹಳೇ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ 13 ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಡಾ.ಚಂದ್ರಗುಪ್ತ ಇದ್ದರು.
1308 ಪ್ರಕರಣ ಪೈಕಿ 762 ಕೇಸ್ನಲ್ಲಿ ಶಿಕ್ಷೆ
ಕಳೆದ ತಿಂಗಳು ನ್ಯಾಯಾಲಯಗಳಲ್ಲಿ ಒಟ್ಟು 1308 ಪ್ರಕರಣಗಳುವಿಚಾರಣೆಪೂರೈಸಿ 762 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಇದರಲ್ಲಿ ನಾಲ್ವರು ಆರೋಪಿಗಳಿಗೆ 14ರಿಂದ 20 ವರ್ಷವರೆಗೆ ಶಿಕ್ಷೆಯಾಗಿದೆ. ಅಲ್ಲದೆ 753 ಪ್ರಕರಣಗಳಲ್ಲಿ 845 ಆರೋಪಿಗಳಿಗೆ ದಂಡ ವಿಧಿಸಲಾಗಿದೆ ಎಂದು ದಯಾನಂದ್ ವಿವರಿಸಿದರು.