ತುಮಕೂರು : ದನದ ಕೊಟ್ಟಿಗೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿದ್ದ ಪರಿಣಾಮ 1 ಕರು ಸೇರಿದಂತೆ 4 ಹಸುಗಳು ಸಜೀವವಾಗಿ ದಹನಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮದಲ್ಲಿ ನಡೆದಿದೆ.
ಕಳೆದ ಮಾರ್ಚ್ 10 ರಂದು ನಡೆದಿದ್ದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮದ ರೈತ ಕೊಂಡಪ್ಪನ ಜಮೀನಿನ ತೋಟದಲ್ಲಿದ್ದ ದನದ ಹಟ್ಟಿಯಲ್ಲಿ ದುರ್ಘಟನೆ ಸಂಭವಿಸಿದೆ.ತೋವಿನಕೆರೆ ಗ್ರಾಮದ ರೈತ ಕೊಂಡಪ್ಪ ಎಂಬಾತನ ಜಮೀನಿನ ಶೆಡ್ಡಿನಲ್ಲಿ ಹಸುಗಳನ್ನು ಕಟ್ಟಿ ಹೋದ ನಂತರ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಶೆಡ್ಡಿಗೆ ವಿದ್ಯುತ್ ಸಂಪರ್ಕವು ಇಲ್ಲ, ಮತ್ತು ದೀಪದ ಬೆಳಕು ಇರದಿದ್ದರೂ ಹೇಗೆ ಬೆಂಕಿ ಆವರಿಸಿದೆ ಎಂದು ರೈತ ಅನುಮಾನ ವ್ಯಕ್ತಪಡಿಸಿದ್ದಾನೆ. ಸ್ಥಳಕ್ಕೆ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗಭೂಷನ್, ಕಂದಾಯ ಇಲಾಖೆ ಪ್ರತಾಪ್, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.