ವಿಜಯಪುರ : ಕಾನೂನು ಪ್ರಕಾರ ಆಸ್ತಿ ಘೋಷಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇದೀಗ ವಿಜಯಪುರ ಮಹಾನಗರ ಪಾಲಿಗೆ 35 ಸದಸ್ಯರನ್ನು ಅಮಾನತು ಮಾಡಿ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರ ಆದೇಶ ಹೊರಡಿಸಿದ್ದಾರೆ.
ಹೌದು ವಿಜಯಪುರ ಮಹಾನಗರ ಪಾಲಿಕೆಯ 35 ಸದಸ್ಯರನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ. ಕಾನೂನು ಪ್ರಕಾರ ಆಸ್ತಿ ಘೋಷಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಸದಸ್ಯರ ಸದಸ್ಯತ್ವವನ್ನು ಅನರ್ಹತೆ ಮಾಡಿ ಆದೇಶ ಹೊರಡಿಸಲಾಗಿದೆ. ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಂದ ಈ ಕುರಿತು ಆದೇಶ ಹೊರಬಿದ್ದಿದೆ.ವಿಜಯಪುರ ಮಹಾನಗರ ಪಾಲಿಕೆ 35 ಸದಸ್ಯರನ್ನು ಅಮಾನತು ಮಾಡಿದ್ದಾರೆ ಬಿಜೆಪಿ 17 ಕಾಂಗ್ರೆಸ್ 10 ಜೆಡಿಎಸ್ 1 ಎಂಐಎಂ 2, ಹಾಗೂ ಪಕ್ಷೇತರರು 5 ಸದಸ್ಯರ ಸದಸ್ಯತ್ವ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೇ 2022ರ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇವರೆಲ್ಲರೂ ಆಯ್ಕೆಯಾಗಿದ್ದರು. ಜನವರಿ 9, 2024ರಲ್ಲಿ ಮೇಯರ್ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದ ಮೆಹಜಬೀನ್ ಹೊರ್ತಿ ಮೇಯರ್ ಆಗಿದ್ದರೇ, ದಿನೇಶ್ ಹಳ್ಳಿ ಉಪಮೇಯರ್ ಆಗಿ ಆಯ್ಕೆಯಾಗಿದ್ದರು.
ವಿಜಯಪುರ ಮಹಾನಗರ ಪಾಲಿಕೆಯ ಯಾವ ಸದಸ್ಯರೂ ಕಾನೂನು ಪ್ರಕಾರ ಆಸ್ತಿ ಘೋಷಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಕಲಬುರ್ಗಿ ಹೈಕೋರ್ಟ್ ಮೊರೆಯನ್ನು ಮಾಜಿ ಸದಸ್ಯ ಪ್ರಕಾಶ್ ಮಿರ್ಜಿ ಮೈನುದ್ದೀನ್ ಬೀಳಗಿ ಹೋಗಿದ್ದರು. ಹೈಕೋರ್ಟ್ ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿತ್ತು. ಈ ಹಿನ್ನಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ 35 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಬೆಳಗಾವಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.