ಬೆಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮದ ವೇಳೆಯಲ್ಲಿ ಬಿಎಂಟಿಸಿಗೆ ಭರ್ಜರಿ ಆದಾಯವೇ ಹರಿದು ಬಂದಿದೆ. ಡಿಸೆಂಬರ್ 31 ರ ಒಂದೇ ದಿನ 35 ಲಕ್ಷ ಜನರು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದು, ಬರೋಬ್ಬರಿ 5 ಕೋಟಿ ಆದಾಯ ಬಂದಿದೆ.
ಬೆಂಗಳೂರಲ್ಲಿ ಡಿಸೆಂಬರ್ 31 ರಾತ್ರಿಯಂದು ಹೊಸ ವರ್ಷಾಚರಣೆಯನ್ನು ಜನರು ಸಂಭ್ರಮದಿಂದ ಆಚರಿಸಿದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ವಿವಿಧೆಡೆಯಲ್ಲೇ ಜನ ಸಾಗರವೇ ಸೇರಿತ್ತು. ನಗರದ ವಿವಿಧೆಡೆಗಳಿಂದ ಆಗಮಿಸಿದ್ದಂತ ಜನರು ಹೊಸ ವರ್ಷಾಚರಣೆಯನ್ನು ಆಚರಿಸಿ ಸಂಭ್ರಮಿಸಿದರು. ಇವರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಡಿಸೆಂಬರ್ 31 ರ ಒಂದೇ ದಿನ 35 ಲಕ್ಷ ಜನರು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ಹೀಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಬರೋಬ್ಬರಿ ರೂ.5,48,89,254 ಕೋಟಿ ಆದಾಯ ಬಂದಿರುವುದಾಗಿ ತಿಳಿದು ಬಂದಿದೆ.