ಮಂಡ್ಯ : ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿನ್ನೆ ಪುನಃ ಮತ್ತೆ ಬಿಜೆಪಿ ಪಕ್ಷಕ್ಕೆ ತೆರಳಿದ್ದು ಇದೀಗ ಪಕ್ಷಾಂತರ ಪರ್ವ ಜೋರಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಾಗಿ ಮಂಡ್ಯದಲ್ಲಿ ಸಚಿವ ಎಂದು ಚೆಲುವರಾಯಸ್ವಾಮಿ ಸ್ಪೋಟಕ ವಾದಂತ ಹೇಳಿಕೆ ನೀಡಿದ್ದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ 30 ಜನ ಬರುತ್ತಾರೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸ್ನೇಹಿತ ಅಶೋಕಣ್ಣನಿಗೆ ಹೇಳಿ ಬಿಜೆಪಿ ಹಾಗೂ ಜೆಡಿಎಸ್ ನಿಂದ 30 ಜನರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಅದು ಲೋಕಸಭೆ ಚುನಾವಣೆ ಮುಂಚೆ ಕರೆದುಕೊಳ್ಳಬೇಕಾ ಅಥವಾ ಚುನಾವಣೆ ಆದಮೇಲೆ ಕರೆದುಕೊಳ್ಳಬೇಕಾ ಎಂದು ಯೋಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಬರುವ ಕೆಲವು ಜನರ ಹೆಸರನ್ನು ಹೇಳಿದರೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗೆ ಶಾಕ್ ಆಗುತ್ತರೆ. ಸುಮ್ಮನೆ ಇವೆಲ್ಲ ಬಿಟ್ಟು ಚುನಾವಣೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂಬುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.ಯಾವುದೇ ರೀತಿಯಾದಂತಹ ಆಪರೇಷನ್ ಮಾಡುತ್ತಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ವಾಲೆಂಟರಾಗಿ ಪಕ್ಷಕ್ಕೆ ಬರುತ್ತಿದ್ದಾರೆ.