ಬೆಂಗಳೂರು : ಬೆಂಗಳೂರಲ್ಲಿ ಹೊರರಾಜ್ಯಗಳಲ್ಲಿ ನೋಂದಣಿಯಾಗಿ ರಾಜ್ಯದಲ್ಲಿ ತೆರಿಗೆ ಪಾವತಿಸದೆ ವಂಚಿಸುತ್ತಿದ್ದ 30ಕ್ಕೂ ಹೆಚ್ಚಿನಐಷಾರಾಮಿ ಕಾರುಗಳನ್ನು ಬೆಂಗಳೂರು ದಕ್ಷಿಣ ವಲಯ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ಐಷಾರಾಮಿ ಕಾರುಗಳಿಗೆ ತೆರಿಗೆ ವಂಚನೆಯಾಗುತ್ತಿರುವ ಕುರಿತಂತೆ ಕಳೆದ ಶುಕ್ರವಾರದಿಂದ ಭಾನುವಾರದವರೆಗೆ ಸಾರಿಗೆ ಅಧಿಕಾರಿಗಳು ವಿವಿಧೆಡೆ ಕಾರ್ಯ ಚರಣೆ ನಡೆಸಿದರು. ಈ ವೇಳೆ ಬೆನ್ಸ್, ಪೋರ್ಶ್, ಫೆರಾರಿ, ಬಿಎಂಡಬ್ಲ್ಯು ಸೇರಿ ದಂತೆ ಇನ್ನಿತರ ಸಂಸ್ಥೆಗಳ ಐಷಾರಾಮಿ ಕಾರುಗಳು ಹೊರರಾಜ್ಯಗಳಲ್ಲಿ ನೋಂದಣಿಯಾಗಿ ನಂತರ ರಾಜ್ಯದಲ್ಲಿ ಸಾರಿಗೆ ತೆರಿಗೆ ಪಾವತಿಸದೇ ಸಂಚರಿಸುವುದು ಪತ್ತೆಯಾಗಿದೆ.
ಹೀಗೆ ಸುಮಾರು 30ಕ್ಕೂ ಹೆಚ್ಚಿನ ಕಾರು ಪತ್ತೆ ಮಾಡಿ ಅವನ್ನು ಜಪ್ತಿ ಮಾಡ ಲಾಗಿದೆ. ಈ ಕಾರುಗಳಿಂದ ಸುಮಾರು 3 ಕೋಟಿ ರು.ಗೂ ಹೆಚ್ಚಿನ ತೆರಿಗೆ ವಸೂಲಿ ಯಾಗುವ ನಿರೀಕ್ಷೆ ಹೊಂದಲಾಗಿದೆ.ದಕ್ಷಿಣ ವಲಯದ ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ ಮಾರ್ಗ ದರ್ಶನದಲ್ಲಿ ಆರ್‌ಟಿಒಗಳಾದ ಬಿ. ಶ್ರೀನಿವಾಸ್ ಪ್ರಸಾದ್, ಎಲ್. ದೀಪಕ್, ಶ್ರೀನಿವಾಸಪ್ಪ, ರಂಜಿತ್ ಅವರನ್ನೊಳ ಗೊಂಡ 40ಕ್ಕೂ ಹೆಚ್ಚಿನ ಸಿಬ್ಬಂದಿಯ ವಿಶೇಷ ತಂಡಗಳು ವಿವಿಧೆಡೆ ಕಾರ್ಯಾ ಚರಣೆ ನಡೆಸಿದರು.