ಯಾದಗಿರಿ : ಕಳೆದ ವರ್ಷ ರಾಜ್ಯದ ಬಳ್ಳಾರಿ ಬೆಳಗಾವಿ ಹಾಗೂ ರಾಯಚೂರಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೆಳಿಸಿತ್ತು. ಇದೀಗ ಯಾದಗಿರಿಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಆಗುತ್ತಿದ್ದು, ಇಂದು ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನಲ್ಲಿ ಮತ್ತೊಂದು ನವಜಾತ ಶಿಶುವಿನ ಸಾವಾಗಿದೆ. ಎರಡು ವಾರದ ಅಂತರಲ್ಲೇ ಮೂರು ನವಜಾತ ಶಿಶುಗಳ ಸಾವಾಗಿದೆ.
ಹೌದು ಯಾದಗಿರಿಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಮುಂದುವರೆದಿದ್ದು, ಎರಡು ವಾರದ ಅಂತರದಲ್ಲೇ ಮೂರು ನವಜಾತ ಶಿಶುಗಳ ಮರಣ ಹೊಂದಿವೆ ಎಂದು ವರದಿಯಾಗಿದೆ. ಹೆರಿಗೆಯಾದ ಬಳಿಕ ನವಜಾತ ಶಿಶು ಸವಾಗಿದೆ ಎಂದು ತಿಳಿದುಬಂದಿದೆ. ತಾಲ್ಲೂಕಿನ ಅನಪುರ ಗ್ರಾಮದ ಗಾಯತ್ರಿ ನವೀನ ದಾಸರಿ ಅವರು ಹೆರಿಗೆಗೆಂದು ಮಂಗಳವಾರ ಪಟ್ಟಣದ ಸಿಎಚ್‌ಸಿಗೆ ಬಂದಿದ್ದರು.
ಆದರೆ, ಕೆಲವು ಪರೀಕ್ಷೆಗಳಿಗೆ ವೈದ್ಯರು ಶಿಫಾರಸು ಮಾಡಿದ್ದಾರೆ. ಪರೀಕ್ಷೆ ಮಾಡಿಸಲು ಯಾದಗಿರಿ ನಗರಕ್ಕೆ ತೆರಳಬೇಕಿದ್ದರಿಂದ ಮಂಗಳವಾರ ರಾತ್ರಿ ಪಟ್ಟಣದಲ್ಲಿರುವ ಸಂಬಂಧಿಕರ ಮನೆಯಲ್ಲಿ ತಂಗಿದ್ದಾರೆ.ನಿನ್ನೆ ಮಧ್ಯಾಹ್ನ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮತ್ತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಆ ವೇಳೆಗೆ ಶಿಶುವಿನ ತಲೆ ಭಾಗವು ಹೊರಬಂದಿತ್ತು. ನಂತರ ಆರೋಗ್ಯ ಕೇಂದ್ರ