ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಭಜರಂಗಿ ಸಿನೆಮಾದಲ್ಲಿ ನಟಿಸಿದ್ದ ಕಾರುಣ್ಯ ರಾಮ್ ಗೆ ಇದೀಗ ಸಾಲಗಾರರ ಕಾಟ ಶುರುವಾಗಿದ್ದು, ತಂಗಿಯ ಬೆಟ್ಟಿಂಗ್ ಹುಚ್ಚಿಗೆ ಬೇಸತ್ತು ಸಿಸಿಬಿ ಪೊಲೀಸರಿಗೆ ತಂಗಿ ವಿರುದ್ಧವೇ ಕಾರುಣ್ಯ ರಾಮ್ ದೂರು ನೀಡಿದ್ದಾರೆ.
ಹೌದು ಸಮೃದ್ಧಿ ರಾಮ್ ಸೇರಿದಂತೆ ಹಲವರ ವಿರುದ್ಧ ಕಾರುಣ್ಯ ದೂರು ನೀಡಿದ್ದಾರೆ ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ ವಿರುದ್ಧ ಕಾರುಣ್ಯ ದೂರು ನೀಡಿದ್ದಾರೆ. ಕಾರುಣ್ಯ ರಾಮ್ ಜೊತೆ ಮನೆಯಲ್ಲಿಯೇ ಸಮೃದ್ಧಿ ವಾಸವಿದ್ದರು. ಆನ್ಲೈನ್ ಬೆಟ್ಟಿಂಗ್ ನಲ್ಲಿ 25 ಲಕ್ಷ ರೂಪಾಯಿ ಸಮೃದ್ಧಿ ಕಳೆದುಕೊಂಡಿದ್ದಾರೆ.
ಇದಕ್ಕಾಗಿ ಖಾಸಗಿ ವ್ಯಕ್ತಿಗಳಿಂದ 25 ಲಕ್ಷ ರೂಪಾಯಿ ಸಾಲ ಮಾಡಿದ್ದಳು ಇದೀಗ ಸಮೃದ್ಧಿ ಹಣ ನೀಡಿದವರಿಂದ ಕಾರುಣ್ಯ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಕಾರುಣ್ಯ ಮನೆಯವಳಿ ಬಂದು ಗಲಾಟೆ ಮಾಡಿದ ಆರೋಪ ಕೇಳಿ ಬಂದಿದೆ. ಇದರಿಂದ ಬೇಸತ್ತ ಕಾರುಣ್ಯ ರಾಮ್ ತಂಗಿ ಸಮೃದ್ಧ ರಾಮ ಸೇರಿದಂತೆ ಹಲವರ ವಿರುದ್ಧ ಸಿಸಿಬಿ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.








