ಬೆಂಗಳೂರು : 2026ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2026ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಹಲವು ಜಿಲ್ಲೆಗಳಿಂದ ಮಂಡಲಿಗೆ ಸಲ್ಲಿಸಲಾಗಿರುತ್ತದೆ. ಕೆಲವು ಜಿಲ್ಲೆಗಳಿಂದ ಇನ್ನೂ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಸಲ್ಲಿಸಿರುವುದಿಲ್ಲ. ಹಾಗಾಗಿ ಎಲ್ಲಾ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳ ಅಂತಿಮ ಪಟ್ಟಿಯ ದೃಢೀಕೃತ ಮತ್ತು ಸಾಪ್ಟ್ ಪ್ರತಿಯನ್ನು ಮಂಡಲಿಯ ಇ-ಮೇಲ್ ವಿಳಾಸ sadpi.csec.kseeb@gmail.com ಕ್ಕೆ ತಪ್ಪದೆ ಕಳುಹಿಸುವುದು.
ದಿನಾಂಕ:08-12-2025 ರಂದು ನಡೆದ ವಿಡಿಯೋ ಕಾನ್ಸರೆನ್ಸ್‌ನಲ್ಲಿ ಚರ್ಚಿಸಿ ಸೂಚಿಸಿರುವಂತೆ ಈ ಕೆಳಕಂಡ ಅಂಶಗಳನ್ನು ಪರೀಕ್ಷಾ ಕೆಂದ್ರಗಳ ರಚನೆ ಸಂಬಂಧ ಅಳವಡಿಸಿಕೊಳ್ಳಲು ಸೂಚಿಸಿದೆ.
1. ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ ಪರೀಕ್ಷಾ ಕೇಂದ್ರಗಳು ಹೆಚ್ಚಾಗದಂತೆ ಕ್ರಮ ವಹಿಸುವುದು.
2. ಗುರುತಿಸಲಾಗಿರುವ ಪರೀಕ್ಷಾ ಕೇಂದ್ರಗಳು, ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್ ಮಾಹಿತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮಗೊಳಿಸುವುದು.
3. ಜಿಲ್ಲಾ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ಪರಿಕ್ಷಾ ಕೇಂದ್ರಗಳ ಪಟ್ಟಿಯನ್ನು ದೃಢೀಕರಿಸಿ, ದೃಢೀಕರಿಸಿದ ಪಟ್ಟಿಯು ಸ್ಪಷ್ಟವಾಗಿ ಕಾಣುವಂತೆ ಸ್ಕ್ಯಾನ್ ಮಾಡಿ (ಮೊಬೈಲ್‌ನಲ್ಲಿ ಫೋಟೋ/ಸ್ಕ್ಯಾನ್ ಮಾಡಿರಬಾರದು) ಹಾಗೂ ಎಕ್ಸೆಲ್‌ನಲ್ಲಿ sadpi.csec.kseeb@gmail.com ಈ ವಿಳಾಸಕ್ಕೆ ಇ-ಮೇಲ್ ಮುಖಾಂತರ ಕಳುಹಿಸಲು ತಿಳಿಸಿದೆ. ಕಾಪಿ
4. ವಿಡಿಯೋ ಕಾನ್ಸರೆನ್ಸ್‌ನಲ್ಲಿ ಚರ್ಚಿಸಿದಂತೆ ಹಾಗೂ ಉಲ್ಲೇಖ(1) ರ ಸುತ್ತೋಲೆಯಲ್ಲಿರುವ ಎಲ್ಲಾ ಅಂಶಗಳನ್ನು ಆಧರಿಸಿ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಅಂತಿಮಗೊಳಿಸಿ, ಪರೀಕ್ಷಾ ಕೇಂದ್ರಗಳ ದೃಢೀಕೃತ ಮತ್ತು ಸಾಪ್ಟ್ ಪ್ರತಿಯನ್ನು 2:11-12-2025 sadpi.csec.kseeb@gmail.com & 3 ರೊಳಗಾಗಿ &. ಮಂಡಲಿಯ ಇ-ಮೇಲ್ ವಿಳಾಸ
5. ಜಿಲ್ಲಾ ನೋಡಲ್ ಅಧಿಕಾರಿಗಳ ಖುದ್ದು ಸಭೆಯನ್ನು ಡಿಸೆಂಬರ್ ಮೂರನೇ ವಾರದಲ್ಲಿ ಕರೆಯಲಾಗುವುದು, ಸಭೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಸಭೆಗೆ ಬರುವಾಗ ಉಲ್ಲೇಖ-01ರ ಸುತ್ತೋಲೆಯೊಂದಿಗೆ ಒದಗಿಸಿರುವ ನಾಲ್ಕು ನಮೂನೆಗಳಲ್ಲಿ ಪರೀಕ್ಷಾ ಕೇಂದ್ರಗಳ ಮಾಹಿತಿಗಳನ್ನು ಭರ್ತಿ ಮಾಡಿ ದೃಢೀಕೃತ ಹಾರ್ಡ್ ಪ್ರತಿಯನ್ನು ಮಂಡಲಿಗೆ ಸಲ್ಲಿಸಲು ಸೂಚಿಸಿದೆ.
6. ಮುಂದುವರೆದು, 2025-26ನೇ ಸಾಲಿನ ಶಾಲಾ ಸಂಕೇತ ನೀಡಲು ಮಂಡಲಿಗೆ ಪ್ರಸ್ತಾವನೆ ಸಲ್ಲಿಸುವಾಗ ಶಾಲಾ ಮಂಜೂರಾತಿ ಆದೇಶದ ಪ್ರತಿ ಹಾಗೂ ಮಾನ್ಯತೆ ನವೀಕರಣದ ಪ್ರತಿಗಳಲ್ಲಿರುವ ಶಾಲೆಯ ಹೆಸರು, ವಿಳಾಸ ಭಿನ್ನವಾಗಿರುವುದು ಗಮನಿಸಲಾಗಿದ್ದು, ಎರಡರಲ್ಲೂ ಒಂದೇ ರೀತಿ ಇರುವಂತೆ ಕ್ರಮ ವಹಿಸುವುದು.
7. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕಿನ ನೋಡಲ್ ಅಧಿಕಾರಿಗಳು ಎಸ್.ಎಸ್.ಎಲ್.ಸಿ SSLC REGISTRATION DASHBOARDನ್ನು ಒಮ್ಮೆ ಗಮನಿಸುವುದು.
8. ಶೂನ್ಯ ದಾಖಲಾತಿ ಇರುವ ಶಾಲೆಗಳನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಕ್ರಮ ವಹಿಸುವುದು.
9. ದಾಖಲಾತಿಯಿದ್ದು, ಶಾಲಾ ಸಂಕೇತ ಪಡೆಯದೇ ಇರುವ ಶಾಲೆಯ ವಿದ್ಯಾರ್ಥಿಗಳ ನೋಂದಣಿಗೆ ಕ್ರಮವಹಿಸುವುದು. SATS & KSEAB DASHBOARDನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವ್ಯತ್ಯಾಸವಿರುವುದನ್ನು ಗಮನಿಸಿ ನೋಂದಣಿಗೆ ಕ್ರಮವಹಿಸುವುದು.
10. ಖಾಸಗಿ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲಾ ಲಾಗಿನ್‌ನಲ್ಲಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು.
11. ನೋಂದಣಿ ಮುಗಿಸಿರುವ ಶಾಲೆಗಳು ಕೂಡಲೇ ಚಲನ್ ಡೌಗ್ಲೋಡ್ ಮಾಡಿ ಹಣ ಪಾವತಿಸುವಂತೆ ಕ್ರಮವಹಿಸುವುದು.









