ಕೊಪ್ಪಳ: ನಗರದ ಮೆಟ್ರಿಕ್ ಪೂರ್ವ ವಸತಿ ಶಾಲೆಯಲ್ಲಿ ಊಟ ಸೇವಿಸಿದ ನಂತರ 20 ವಿದ್ಯಾರ್ಥಿನಿಯರಿಗೆ ವಾಂತಿ ಭೇದಿ ಉಂಟಾಗಿ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ನಿನ್ನೆ ಮುಂಜಾನೆ ಪಲಾವ್ ಸೇವನೆಯ ಬಳಿಕ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯರಿಗೆ ಏಕಾಏಕಿ ವಾಂತಿ ಭೇದಿ ಆರಂಭವಾಗಿದೆ.ಈಗ ಹಲವು ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಮಾತನಾಡಿರುವ ಮಕ್ಕಳ ಪೋಷಕರು ‘ವಸತಿ ನಿಲಯದಲ್ಲಿ ನೀರಿನ ವ್ಯವಸ್ಥೆ ಹಾಗೂ ಊಟ ಸರಿಯಾಗಿ ನೀಡಲ್ಲ. ಹಾಸ್ಟೆಲ್ನಲ್ಲಿ ಸಾಕಷ್ಟು ಅವ್ಯವಸ್ಥೆ ಇದ್ದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಹ ಸರಿಯಾಗಿ ನೀಡುವುದಿಲ್ಲ, ಅಧಿಕಾರಿಗಳು ಬಂದಾಗ ಮಾತ್ರ ವ್ಯವಸ್ಥೆ ಮಾಡ್ತಾರೆ. ಉಳಿದ ದಿನಗಳಲ್ಲಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲ್ಲ’ ಎಂದು ಆರೋಪಿಸಿದ್ದಾರೆ.