ಬೆಂಗಳೂರು : ಗೋಡೆ ಕುಸಿದು ಎರಡು ಬೈಕ್, ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಅಲ್ಲಿಯೇ ಆಟವಾಡುತ್ತಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನ ಸುಧಾಮ್ ನಗರದ ಸಿಕೆಸಿ ಗಾರ್ಡನಲ್ಲಿ ಒಂದು ಘಟನೆ ನಡೆದಿದೆ.
ನೆನ್ನೆ ಸಂಜೆನೆ ಸರ್ಕಾರಿ ಫಾರ್ಮಸಿ ಕಾಲೇಜಿನ ಗೋಡೆ ಕುಸಿದು ಅವಘಡ ಸಂಭವಿಸಿತ್ತು. ಗೋಡೆ ಶಿಥಿಲಾವಸ್ಥೆಯಲ್ಲಿದ್ದ ಕುರಿತು ಬಿಬಿಎಂಪಿಗೆ ಮಾಹಿತಿ ನೀಡಲಾಗಿತ್ತು, ಸ್ಥಳೀಯರು ಈ ಹಿಂದೆಯೂ ಮಾಹಿತಿ ನೀಡಿದ್ದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಧದಷ್ಟು ಸರ್ಕಾರಿ ಫಾರ್ಮಸಿ ಕಾಲೇಜಿನ ಕಾಂಪೌಂಡ್ ಕುಸಿದಿದೆ. ಯಾವುದೇ ಕ್ಷಣದಲ್ಲಾದರೂ ಪೂರ್ತಿ ಗೋಡೆ ಕುಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
.