ಬೆಂಗಳೂರು : ವಕ್ಫ್ ವಿಚಾರವಾಗಿ ಇಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಬಿಜೆಪಿಯ ಪರಿಷತ್ ಸದಸ್ಯ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 1500 ವರ್ಷಗಳ ಹಿಂದೆ ಯಾವ ಅಲ್ಲಾನು ಇರಲಿಲ್ಲ ಯಾವ ಮುಲ್ಲಾನು ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹ್ಮದ್ನನ್ನು ನಂಬಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅವಕಾಶಕೊಟ್ಟ ಜನರನ್ನೇ ಸುಡಲು ಕಾಂಗ್ರೆಸ್ ಪಕ್ಷ ಹೊರಟಿದೆ ಎಂದು ಬಿಜೆಪಿ ಪ್ರತಿಭಟನೆಯಲ್ಲಿ ಪರಿಷತ್ ಸದಸ್ಯ ಸಿಟಿ ರವಿ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದು ಬಸ್ಮಾಸುರನಿಗೆ ಅವಕಾಶ ಕೊಟ್ಟಂತಾಗಿದೆ. ಭಸ್ಮಾಸುರನ ಪಾತ್ರವನ್ನು ಕಾಂಗ್ರೆಸ್ ನಿರ್ವಹಿಸುತ್ತಿದೆ. ಬಕಾಸುರನ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಕಿಡಿ ಕಾರಿದರು.
1500 ವರ್ಷಗಳ ಹಿಂದೆ ಯಾವ ಅಲ್ಲಾನು ಇರಲಿಲ್ಲ. ಮುಲ್ಲಾನು ಇರಲಿಲ್ಲ. ವಿಧಾನಸೌಧನು ನಮ್ಮದು ಅಂತಾರೆ ಅಂದರೆ ಈ ಸೊಕ್ಕು ಎಲ್ಲಿಂದ ಬಂತು? ಕಾಂಗ್ರೆಸ್ ಕೊಟ್ಟ ಪರಮಾಧಿಕಾರದಿಂದ ಈ ಸೊಕ್ಕು ಬಂದಿದೆ. ನಾಳೆ ವಿಧಾನಸೌಧ ನಮ್ಮದು ನಮಾಜ್ ಮಾಡಬೇಕು ಅಂದರೆ ಸಿದ್ದರಾಮಯ್ಯ ಕೂಡ ಪಂಚೆ ಎತ್ತಿಕೊಂಡು ಓಡಬೇಕಾಗುತ್ತದೆ. ಮಾತು ಎತ್ತಿದರೆ ಕಾಂಗ್ರೆಸ್ ಮುಖಂಡರು ನಮ್ಮ ಪ್ರಧಾನಿ ಅಂತಾರೆ ಸಿದ್ದರಾಮಯ್ಯ ಈಗ ಜಮೀರ್ ಅಹ್ಮದನ್ ನನ್ನು ನಂಬಿಕೊಂಡಿದ್ದಾರೆ ಎಂದು ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ ವಾಗ್ದಾಳಿ ನಡೆಸಿದರು.








